Publish Date: Thu, 03 Feb 2022 (09:01 IST)
Updated Date: Thu, 03 Feb 2022 (09:22 IST)
ಬೆಂಗಳೂರು: ಇತ್ತೀಚೆಗೆ ಥಿಯೇಟರ್ ಗಳಷ್ಟೇ ಒಟಿಟಿ ಫ್ಲ್ಯಾಟ್ ಫಾರಂಗಳೂ ಜನಪ್ರಿಯವಾಗುತ್ತಿದ್ದು, ಯಾವ ಸಿನಿಮಾ ರಿಲೀಸ್ ಆಗುತ್ತದೆ ಎಂಬ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿರುತ್ತದೆ.
ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬಂದ ಒನ್ ಕಟ್ ಟು ಕಟ್ ಸಿನಿಮಾ ಒಟಿಟಿಯಲ್ಲಿ ತೆರೆ ಕಾಣುತ್ತಿದೆ.
ಡ್ಯಾನಿಶ್ ಸೇಠ್ ನಾಯಕರಾಗಿರುವ ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದು ಪಕ್ಕಾ ಎಂಟರ್ ಟೈನರ್ ಸಿನಿಮಾವಾಗಿದ್ದು, ಒಟಿಟಿ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ.