Publish Date: Thu, 17 Aug 2023 (16:06 IST)
Updated Date: Thu, 17 Aug 2023 (16:08 IST)
ಬೆಂಗಳೂರು: ಮೋಹಕತಾರೆ ರಮ್ಯಾ ಬಹಳ ದಿನಗಳ ನಂತರ ನಾಯಕಿಯಾಗಿ ಕಮ್ ಬ್ಯಾಕ್ ಮಾಡುತ್ತಿರುವ ಡಾಲಿ ಧನಂಜಯ್ ನಾಯಕರಾಗಿರುವ ಉತ್ತರಕಾಂಡ ಸಿನಿಮಾ ಮುಹೂರ್ತ ನಡೆದು ಎಷ್ಟೋ ದಿನಗಳಾಗಿವೆ. ಕೊನೆಗೂ ಈಗ ಚಿತ್ರತಂಡದಿಂದ ಅಪ್ ಡೇಟ್ ಸಿಕ್ಕಿದೆ.
ಉತ್ತರಕಾಂಡ ಸಿನಿಮಾ ಇದೀಗ ನಾಯಕನ ಫಸ್ಟ್ ಲುಕ್ ರಿವಿಲ್ ಮಾಡಲು ಹೊರಟಿದೆ. ಧನಂಜಯ್ ಈ ಸಿನಿಮಾದಲ್ಲಿ ಗಬ್ರು ಸತ್ಯ ಆಗಿ ಕಾಣಿಸಿಕೊಳ್ಳುತ್ತಿದ್ದು ಅವರ ಲುಕ್ ಹೇಗಿರಲಿದೆ ಎಂದು ಆಗಸ್ಟ್ 22 ರಂದು ಸಂಜೆ 5.55 ಕ್ಕೆ ಚಿತ್ರತಂಡ ರಿವೀಲ್ ಮಾಡಲಿದೆ.
ಈ ಸಿನಿಮಾದಲ್ಲಿ ರಮ್ಯಾ ಮಾತ್ರವಲ್ಲದೆ, ದೂದ್ ಪೇಡ ದಿಗಂತ್ ಕೂಡಾ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಹಿಂದೆ ಡಾಲಿ ಧನಂಜಯ್ ಜೊತೆ ರತ್ನನ್ ಪ್ರಪಂಚ ಸಿನಿಮಾ ಮಾಡಿದ್ದ ತಂಡವೇ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.