Publish Date: Fri, 04 Feb 2022 (09:40 IST)
Updated Date: Fri, 04 Feb 2022 (09:45 IST)
ಬೆಂಗಳೂರು: ಸದಭಿರುಚಿಯ ಚಿತ್ರಗಳನ್ನೇ ಮಾಡುತ್ತಾ ಬಂದಿರುವ ಅದ್ಭುತ ಕಲಾವಿದ ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ಸಿನಿಮಾಗಳಲ್ಲಿ 100 ಕೂಡಾ ಒಂದು.
ಸೈಬರ್ ಕ್ರೈಂ ಆಧಾರಿತ ಫ್ಯಾಮಿಲಿ, ಥ್ರಿಲ್ಲರ್ ಕಥಾ ಹಂದರವಿರುವ 100 ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ಸಿನಿಮಾ ಇಂದಿನಿಂದ ಒಟಿಟಿ ಫ್ಲ್ಯಾಟ್ ಫಾರಂ ಜೀ5 ಆಪ್ ನಲ್ಲಿ ಲಭ್ಯವಿದೆ. ರಮೇಶ್ ಅರವಿಂದ್ ಜೊತೆಗೆ ರಚಿತಾ ರಾಂ ಕೂಡಾ ಪ್ರಮುಖ ಪಾತ್ರವಹಿಸಿದ್ದಾರೆ. ರಮೇಶ್ ಅರವಿಂಧ್ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಸಿನಿಮಾ ಇದು. ಸೋಷಿಯಲ್ ಮೀಡಿಯಾ ಎಂಬುದು ಹೇಗೆ ಒಂದು ಕುಟುಂಬದ ನೆಮ್ಮದಿಯನ್ನು ತಲ್ಲಣಗೊಳಿಸುತ್ತದೆ ಎಂಬ ಕತೆ ಇದರಲ್ಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಲು ಇಷ್ಟಪಡುವವಿರಗೆ ಈ ಸಿನಿಮಾ ಇಷ್ಟವಾಗಬಹುದು.