Publish Date: Thu, 05 Sep 2019 (10:02 IST)
Updated Date: Thu, 05 Sep 2019 (10:03 IST)
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಪೈಲ್ವಾನ್ ಸಿನಿಮಾದ ಬಿಡುಗಡೆ ಖುಷಿಯಲ್ಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 12 ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕಿಚ್ಚನಿಗೆ ಜತೆಯಾಗಿ ಸುನಿಲ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇದೀಗ ಮತ್ತೊಬ್ಬ ಪ್ರತಿಭೆ ರಮೇಶ್ ಅರವಿಂದ್ರ ಪೈಲ್ವಾನ್ ಸಿನಿಮಾಗೆ ಸಾಥ್ ನೀಡುತ್ತಿದ್ದಾರೆ. ಆದರೆ ಅಭಿನಯದ ಮೂಲಕವಂತೂ ಅಲ್ಲ.
ಪೈಲ್ವಾನ್ ಸಿನಿಮಾದ ಆರಂಭದಲ್ಲಿ ಬರುವ ಕುಸ್ತಿ ಕುರಿತಾದ ಪರಿಚಯಕ್ಕೆ ರಮೇಶ್ ಅರವಿಂದ್ ಹಿನ್ನಲೆ ಧ್ವನಿ ನೀಡಲಿದ್ದಾರೆ. ಕನ್ನಡ ವರ್ಷನ್ ಗೆ ರಮೇಶ್ ಧ್ವನಿ ನೀಡಿದ್ದು ಈಗಾಗಲೇ ರೆಕಾರ್ಡಿಂಗ್ ಮುಗಿಸಿದ್ದಾರೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಸುದೀಪ್, ಈ ಬಹುಮುಖ ಪ್ರತಿಭೆ ನಮ್ಮ ಪೈಲ್ವಾನ್ ಸಿನಿಮಾದಲ್ಲಿ ಕೆಲಸ ಮಾಡಿರುವುದು ನಮಗೆ ಗೌರವ. ಈ ಬಾರಿ ಆನ್ ಸ್ಕ್ರೀನ್ ನಲ್ಲಿ ಅಲ್ಲ. ಆದರೆ ಪೈಲ್ವಾನ್ ನಲ್ಲಿ ಜತೆಯಾಗಿ ಕೆಲಸ ಮಾಡಿರುವುದಕ್ಕೆ ಸಂತೋಷವಿದೆ. ಧನ್ಯವಾದಗಳು ಸರ್. ಎಂದು ಸುದೀಪ್ ಟ್ವೀಟ್ ಮುಖಾಂತರ ರಮೇಶ್ ಅರವಿಂದ್ ಗೆ ಧನ್ಯವಾದ ಸಲ್ಲಿಸಿದ್ದಾರೆ.