Select Your Language

Notifications

webdunia
webdunia
webdunia
webdunia

ಸೃಜನ್ ಜತೆ ಸಂಬಂಧ ಕಲ್ಪಿಸಿದ್ದಕ್ಕೆ ಅಭಿಮಾನಿ ಮೇಲೆ ಸಿಟ್ಟಾದ ನಟಿ ಶ್ವೇತಾ ಚೆಂಗಪ್ಪ

ಸೃಜನ್ ಜತೆ ಸಂಬಂಧ ಕಲ್ಪಿಸಿದ್ದಕ್ಕೆ ಅಭಿಮಾನಿ ಮೇಲೆ ಸಿಟ್ಟಾದ ನಟಿ ಶ್ವೇತಾ ಚೆಂಗಪ್ಪ
ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2019 (09:44 IST)
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹೆಚ್ಚು ಆಕ್ಟಿವ್ ಆಗಿರುವಂತೆ, ಅವರಿಗೆ ಅಭಿಮಾನಿಗಳ ಕಾಟವೂ ಹೆಚ್ಚಾಗುತ್ತಿದೆ. ಇದೀಗ ಅಭಿಮಾನಿಯೊಬ್ಬನ ಅಸಭ್ಯ ಪ್ರಶ್ನೆಯಿಂದ ನಟಿ ಶ್ವೇತಾ ಚೆಂಗಪ್ಪ ಸಿಟ್ಟಿಗೆದ್ದ ಪ್ರಕರಣ ನಡೆದಿದೆ.


ತುಂಬು ಗರ್ಭಿಣಿಯಾಗಿರುವ ಶ್ವೇತಾ ಚೆಂಗಪ್ಪ ಸದ್ಯಕ್ಕೆ ಮಜಾ ಟಾಕೀಸ್ ಶೋನಲ್ಲಿ ಕಾಣಿಸುತ್ತಿಲ್ಲ. ಅಮ್ಮನಾಗುತ್ತಿರುವ ಖುಷಿಯಲ್ಲಿರುವ ಶ್ವೇತಾ ಪತಿ ಜತೆಗೆ ಫೋಟೋ ಶೂಟ್ ನಡೆಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.

ಈ ಫೋಟೋಗಳನ್ನು ನೋಡಿದ ವ್ಯಕ್ತಿಯೊಬ್ಬ ಶ‍್ವೇತಾಗೆ ‘ಕಂಗ್ರಾಜ್ಯುಲೇಷನ್ಸ್. ಕೊನೆಗೂ ಸೃಜನ್ ಮಗುವಿಗೆ ತಾಯಿಯಾಗುತ್ತಿದ್ದೀರಿ’ ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದಿರುವ ಶ್ವೇತಾ  ಆತನ ಜನ್ಮ ಜಾಲಾಡಿದ್ದಾರೆ. ‘ನನ್ನ ವೈಯಕ್ತಿಕ ವಿಚಾರಗಳಿಗೆ ಸೃಜನ್ ಲೋಕೇಶ್ ಜತೆಗೆ ಯಾಕೆ ಸಂಬಂಧ ಕಲ್ಪಿಸಿಕೊಳ್ಳುತ್ತೀರಿ? ಅಷ್ಟಕ್ಕೂ ನಾನಿಲ್ಲಿ ಮಜಾ ಟಾಕೀಸ್ ನ ರಾಣಿ ಪಾತ್ರ ಮಾಡ್ತಾ ಇಲ್ಲ. ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವಿನ ವ್ಯತ್ಯಾಸ ತಿಳಿದು, ನಿಮ್ಮ ಕಾಮೆಂಟ್ ಮಾಡಿ’ ಎಂದು ಶ್ವೇತಾ ಸಿಟ್ಟಿನಿಂದಲೇ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವಾಗ ಕನ್ಯತ್ವ ಕಳೆದುಕೊಂಡೆ ಎಂಬ ಅಭಿಮಾನಿಯ ಪ್ರಶ್ನೆಗೆ ನಟಿ ಇಲಿಯಾನಾ ಉತ್ತರಿಸಿದ್ದು ಏನು ಗೊತ್ತಾ?!