Select Your Language

Notifications

webdunia
webdunia
webdunia
webdunia

ನಟ ರಾಮ್ ಕುಮಾರ್ ಮಗಳು ಸಿನಿಮಾಗೆ ಎಂಟ್ರಿ

ನಟ ರಾಮ್ ಕುಮಾರ್ ಮಗಳು ಸಿನಿಮಾಗೆ ಎಂಟ್ರಿ
ಬೆಂಗಳೂರು , ಸೋಮವಾರ, 3 ಜೂನ್ 2019 (09:57 IST)
ಬೆಂಗಳೂರು: ಒಂದು ಕಾಲದಲ್ಲಿ ಹುಡುಗಿಯರ ಹಾಟ್ ಫೇವರಿಟ್ ಆಗಿದ್ದ ಸ್ಪುರದ್ರೂಪಿ ನಟ ರಾಮ್ ಕುಮಾರ್ ನಿಮಗೆಲ್ಲಾ ಗೊತ್ತೇ ಇದೆ. ಅದೇ ರಾಮ್ ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್ ಈಗ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.


ಡಾ. ರಾಜ್ ಕುಮಾರ್ ಮೊಮ್ಮಗಳೂ ಆಗಿರುವ ಧನ್ಯಾ ರಾಮ್ ಕುಮಾರ್ ಇನ್ನೂ ಟೈಟಲ್ ಇಡದ ಹೊಸ ಸಿನಿಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ.

ಸುಮನ್ ಜಾದೂಗಾರ್ ಅವರು ಈ ಸಿನಿಮಾ ಮಾಡುತ್ತಿದ್ದು, ಇದರಲ್ಲಿ ಸೂರಜ್ ಗೌಡ ನಾಯಕರಾಗಿ ನಟಿಸಲಿದ್ದಾರೆ. ಸಿನಿಮಾ ರಂಗಕ್ಕೆ ಎಂಟ್ರಿ ಇಡುತ್ತಿರುವ ಬಗ್ಗೆ ಮಾತನಾಡಿರುವ ಧನ್ಯಾ ಸಿನಿಮಾ ಕತೆಯೇ ನನಗೆ ಇಷ್ಟವಾಯಿತು. ಅದಕ್ಕೇ ಒಪ್ಪಿಕೊಂಡೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿಯಿಂದ ಹೊರಬಂದ ಗುರುಮೂರ್ತಿ