Select Your Language

Notifications

webdunia
webdunia
webdunia
Tuesday, 8 April 2025
webdunia

ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ!

ಸ್ಯಾಂಡಲ್‍ವುಡ್
ಬೆಂಗಳೂರು , ಶನಿವಾರ, 30 ಅಕ್ಟೋಬರ್ 2021 (11:06 IST)
ಹೃದಯಾಘಾತದಿಂದ ಸಂಭವಿಸಿರುವ ಈ ಸಾವಿನ ಕುರಿತು ಅವರು ಆತಂಕದಲ್ಲೇ ಕೆಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಫಿಟ್ನೆಸ್ ಕಾಪಾಡಿಕೊಂಡಿರುವವರಿಗೆ ಈ ರೀತಿ ಸಾವು ಸಂಭವಿಸುವುದಿಲ್ಲ ಎಂದು ಅನೇಕರು ಹೇಳುವುದುಂಟು. ಆದರೆ ಪುನೀತ್ ರಾಜ್ಕುಮಾರ್ ನಿಧನದ ಬಳಿಕ ಆ ಮಾತನ್ನು ನಂಬಲಾಗುತ್ತಿಲ್ಲ. ಇದೇ ವಿಚಾರವಾಗಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ‘ರೆಗ್ಯೂಲರ್ ವರ್ಕೌಟ್ ಜೊತೆಗೆ ಆರೋಗ್ಯಕರ ಅಭ್ಯಾಸ ಇಟ್ಟುಕೊಳ್ಳುವುದು ಹಾಗೂ ಸಡನ್ ಸಾವು ಸಂಭವಿಸುವುದರ ನಡುವೆ ಯಾವುದೇ ಸಂಬಂಧ ಇಲ್ಲ ಎಂಬ ಕಟು ಸತ್ಯವು ಪುನೀತ್ ಅವರ ದುರಂತ ನಿಧನನಿಂದ ಬಯಲಾಗಿದೆ. ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ? ದೇವರು ಇರುವುದೇ ಹೌದಾದರೆ ಅವನೇ ಉತ್ತರಿಸಬೇಕು’ ಎಂದು ಆರ್ಜಿವಿ ಬರೆದುಕೊಂಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ!