Select Your Language

Notifications

webdunia
webdunia
webdunia
webdunia

ಅಣ್ಣನ ಸಿನಿಮಾಗೆ ಹರಸಿ ಹೊರಟ ಪವರ್ ಸ್ಟಾರ್ ಅಪ್ಪು

ಅಣ್ಣನ ಸಿನಿಮಾಗೆ ಹರಸಿ ಹೊರಟ ಪವರ್ ಸ್ಟಾರ್ ಅಪ್ಪು
ಬೆಂಗಳೂರು , ಶುಕ್ರವಾರ, 29 ಅಕ್ಟೋಬರ್ 2021 (15:18 IST)
ಬೆಂಗಳೂರು: ಇಂದು ಹೃದಯಾಘಾತದಿಂದ ಹಠಾತ್ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರನ್ನೂ ದುಃಖದಲ್ಲಿ ಕಡಲಲ್ಲಿ ಮುಳುಗಿಸಿದ್ದಾರೆ.

ನಿನ್ನೆಯೇ ಸಣ್ಣ ಮಟ್ಟಿನ ಅನಾರೋಗ್ಯದಿಂದ ಬಳಲುತ್ತಿದ್ದರೂ ಇಂದು ಜಿಮ್ ಮಾಡುತ್ತಿದ್ದ ಪುನೀತ್ ಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ವಿಪರ್ಯಾಸವೆಂದರೆ ಇಂದು ತಮ್ಮ ತವರು ಗಾಜನೂರಿಗೆ ತೆರಳಲು ಯೋಜನೆ ಹಾಕಿಕೊಂಡಿದ್ದರಂತೆ.

ಇದಕ್ಕೂ ಮೊದಲು ಇಂದು ಅಣ್ಣ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ಬಿಡುಗಡೆಯಾಗಿದ್ದು, ಈ ಸಿನಿಮಾ ಯಶಸ್ಸು ಕಾಣಲೆಂದು ಬೆಳಗ್ಗೆಯಷ್ಟೇ ಟ್ವಿಟರ್ ಮೂಲಕ ಶುಭ ಕೋರಿದ್ದರು. ಅಣ್ಣನ ಸಿನಿಮಾ ಯಶಸ್ಸು ನೋಡುವ ಮೊದಲೇ ಪುನೀತ್ ಇಹಲೋಕದ ಯಾತ್ರೆ ಮುಗಿಸಿದ್ದು ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಗೆ ತಕ್ಕ ಮಗ ಅಪ್ಪು!