ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ನಿಧನ ಕೇವಲ ಚಿತ್ರರಂಗವನ್ನು ಮಾತ್ರವಲ್ಲ, ಭಾರತೀಯ ಕ್ರಿಕೆಟಿಗರನ್ನೂ ದಿಗ್ಬ್ರಮೆಗೊಳಿಸಿದೆ.
									
			
			 
 			
 
 			
			                     
							
							
			        							
								
																	ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ವಿನಯ್ ಕುಮಾರ್, ಜಾವಗಲ್ ಶ್ರೀನಾಥ್ ಸೇರಿದಂತೆ ಕ್ರಿಕೆಟ್ ಲೋಕವೂ ಪುನೀತ್ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದೆ.
									
										
								
																	ಇವರಲ್ಲದೆ ರಾಜಕೀಯ, ಸಿನಿಮಾ ಗಣ್ಯರು ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ 5 ಗಂಟೆಯಿಂದ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ  ಅವಕಾಶ ನೀಡಲಾಗುತ್ತದೆ. ನಾಳೆ ಅಂತ್ಯ ಕ್ರಿಯೆ ನಡೆಯುವ ಸಾಧ‍್ಯತೆಯಿದೆ.