ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಕ್ಷಿತಾ ಪ್ರೇಮ್

ಗುರುವಾರ, 3 ಅಕ್ಟೋಬರ್ 2019 (09:54 IST)
ಬೆಂಗಳೂರು: ಕ್ರೇಜಿ ಕ್ವೀನ್ ರಕ್ಷಿತಾ ಸಿನಿಮಾದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳದೇ ದಶಕಗಳೇ ಕಳೆದುಹೋಗಿವೆ. ಇದೀಗ ಮತ್ತೆ ತಮ್ಮ ಸಹೋದರನ ಸಿನಿಮಾ ಮೂಲಕ ರಕ್ಷಿತಾ ಬಣ್ಣ ಹಚ್ಚುತ್ತಿದ್ದಾರೆ.


ಸಹೋದರ ರಾಣಾ ಅಭಿನಯಿಸುತ್ತಿರುವ ‘ಏಕ್ ಲವ್ ಯಾ’ ಸಿನಿಮಾಗೆ ಪತಿ ಪ್ರೇಮ್ ನಿರ್ದೇಶಕರು. ಈ ಸಿನಿಮಾದಲ್ಲಿ ರಕ್ಷಿತಾ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.

ಈ ಸಿನಿಮಾದ ಹಾಡೊಂದರಲ್ಲಿ ರಚಿತಾ ರಾಮ್ ಜತೆಗೆ ರಕ್ಷಿತಾ ಕೂಡಾ ಕಾಣಿಸಿಕೊಳ್ಳಲಿದ್ದಾರಂತೆ. ಅದರ ಹೊರತಾಗಿ ಅವರು ಸಿನಿಮಾದಲ್ಲಿ ಪಾತ್ರ ಮಾಡಲಿದ್ದಾರಾ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ ರಕ್ಷಿತಾರನ್ನು ಮತ್ತೆ ತೆರೆ ಮೇಲೆ ನೋಡಬಹುದು ಎಂಬ ವಿಚಾರ ಅಭಿಮಾನಿಗಳಿಗೆ ಖುಷಿಕೊಡಲಿರುವುದಂತೂ ಸುಳ್ಳಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬರ್ತ್ ಡೇ ದಿನ ರಚಿತಾ ರಾಮ್ ಕಡೆಯಿಂದ ಮೂರು ಗುಡ್ ನ್ಯೂಸ್