Select Your Language

Notifications

webdunia
webdunia
webdunia
webdunia

ರಕ್ಷಿತ್ ಶೆಟ್ಟಿ ಇದ್ದಕ್ಕಿದ್ದಂತೆ ಏಕಾಂತ ಹುಡುಕಿ ಹೊರಟಿದ್ದೇಕೆ?

ರಕ್ಷಿತ್ ಶೆಟ್ಟಿ
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಬಳಿಕ, 777 ಚಾರ್ಲಿ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ದಿಡೀರ್ ಆಗಿ ಕೊಡೈಕನಾಲ್ ಗೆ ತೆರಳಿದ್ದಾರೆ.


ಅಷ್ಟಕ್ಕೂ ರಕ್ಷಿತ್ ಈ ಕೂಲ್ ನಾಡಿಗೆ ತೆರಳಲು ಕಾರಣವಿದೆ. ರಕ್ಷಿತ್ ಮುಂದಿನ ಸಿನಿಮಾ ‘ಪುಣ್ಯಕೋಟಿ’ಗೆ ಸ್ಕ್ರಿಪ್ಟ್ ಬರೆಯಲು ಇಂತಹದ್ದೊಂದು ಏಕಾಂತದ ಸ್ಥಳ ಹುಡುಕಿಕೊಂಡು ಹೋಗಿದ್ದಾರಂತೆ.

ರಕ್ಷಿತ್ ಇಂತಹದ್ದೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಂತೇ ಕಾಮೆಂಟ್ ಮಾಡಿರುವ ಅಭಿಮಾನಿಗಳು ದಯವಿಟ್ಟು ಬೇಗ ಬೇಗ ಸಿನಿಮಾ ಮಾಡಿ. ಕನಿಷ್ಠ ವರ್ಷಕ್ಕೊಂದು ಸಿನಿಮಾವಾದರೂ ಮಾಡಿ. ಈಗಿನ ಕಾಲಕ್ಕೆ ತಕ್ಕಂತೆ ಬೇಕಾಗುವ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಂಡು ಒಳ್ಳೆ ಸಿನಿಮಾ ಮಾಡಿ ಎಂಬ ಸಲಹೆಗಳನ್ನು ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರತ್ನ ಹಾಡಿಗೆ ಪುನೀತ್ ರಾಜಕುಮಾರ್-ಸಯ್ಯೇಷಾ ಸ್ಟೆಪ್