ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಕೊಡುಗೆಯೂ ಇತ್ತು.
ಆಂಕರ್ ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ರಕ್ಷಿತ್ ಕೊಡುಗೆ ಏನೆಂದು ವಿವರಿಸಿದ್ದಾರೆ. ಸಾಮಾನ್ಯವಾಗಿ ರಿಷಬ್, ರಕ್ಷಿತ್, ಪ್ರಮೋದ್ ಶೆಟ್ಟಿ ಎಲ್ಲರೂ ಜೊತೆಯಾಗಿಯೇ ಸಿನಿಮಾ ಮಾಡುತ್ತಾರೆ. ಒಂದು ವೇಳೆ ರಿಷಬ್ ಸಿನಿಮಾ ಮಾಡಿದರೆ ರಕ್ಷಿತ್ ಸಹಕಾರ ಇದ್ದೇ ಇರುತ್ತದೆ.
ಈ ಸಿನಿಮಾದ ಟೈಟಲ್ ಗೇ ರಕ್ಷಿತ್ ಕೊಡುಗೆಯಿತ್ತಂತೆ. ಕಾಂತಾರ ಸಿನಿಮಾದ ಟೈಟಲ್ ಸೂಚಿಸಿದ್ದು ರಕ್ಷಿತ್. ಹಾಗಿದ್ದರೂ ಕೆಲವು ದಿನಗಳವರೆಗೆ ಈ ಟೈಟಲ್ ನ್ನು ರಿಷಬ್ ಫೈನಲ್ ಮಾಡಿರಲಿಲ್ಲವಂತೆ. ಆಗ ರಕ್ಷಿತ್ ಒಂದು ದಂತ ಕತೆ ಎಂಬ ಅಡಿಬರಹವನ್ನೂ ನೀಡಿದ್ದರು. ಅದಾದ ಬಳಿಕ ಟೈಟಲ್ ಓಕೆ ಆಯ್ತು ಎಂದು ರಿಷಬ್ ಹೇಳಿದ್ದಾರೆ.