ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ಮುಗಿಸಿಕೊಂಡು ಈಗ ಸಪ್ತ ಸಾಗರದಾಚೆಯೆಲ್ಲೊ ಸಿನಿಮಾಗೆ ತಯಾರಾಗುತ್ತಿದ್ದಾರೆ.
ಶಿವರಾತ್ರಿ ಪ್ರಯುಕ್ತ ಇಂದು ಚಿತ್ರತಂಡ ಈ ಸಿನಿಮಾದ ರಕ್ಷಿತ್ ಶೆಟ್ಟಿ ಲುಕ್ ನ್ನು ಬಹಿರಂಗಗೊಳಿಸಿದೆ. ಈ ಸಿನಿಮಾದಲ್ಲಿ ರಕ್ಷಿತ್ ಮತ್ತಷ್ಟು ಯಂಗ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಈ ಸಿನಿಮಾದ ನಾಯಕಿ ರುಕ್ಮಣಿ ವಸಂತ್ ಇರುವ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ರಕ್ಷಿತ್ ಇರುವ ಪೋಸ್ಟರ್ ಬಿಡುಗಡೆ ಮಾಡಿದೆ.ಅಲ್ಲದೆ ಈ ಸಿನಿಮಾದಲ್ಲಿ ತಮ್ಮ ಹೆಸರು ಮನು ಎಂದು ಬಹಿರಂಗಗೊಳಿಸಿದ್ದಾರೆ.
ಹೇಮಂತ್ ರಾವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಕ್ಷಿತ್ ತಮ್ಮ ಹೋಂ ಬ್ಯಾನರ್ ಪರಂವಾ ಸ್ಟುಡಿಯೋಸ್ ನಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.