Daily Horoscope

Select Your Language

Notifications

webdunia
webdunia
webdunia
webdunia

Rakshit Shetty Birthday: ಫ್ರೆಂಡ್ ಗೆ ಗುಡ್ ನ್ಯೂಸ್ ಕೊಡಕ್ಕೆ ಹೇಳಿ ರಿಷಭ್ ಶೆಟ್ರೇ...

Rakshit Shetty
ಬೆಂಗಳೂರು: ಇಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜನ್ಮದಿನವಾಗಿದ್ದು, ಗೆಳೆಯ ರಿಷಭ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಿಮ್ಮ ಫ್ರೆಂಡ್ ಗೆ ಗುಡ್ ನ್ಯೂಸ್ ಕೊಡಲು ಹೇಳಿ ಶೆಟ್ರೇ ಎಂದು ಕಾಲೆಳೆದಿದ್ದಾರೆ.

ಸಪ್ತಸಾಗರದಾಚೆ ಎಲ್ಲೊ 2 ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಸಿನಿಮಾ ಬಗ್ಗೆ ಯಾವುದೇ ಅಪ್ ಡೇಟ್ ಇಲ್ಲ. ಇಂದು ಅವರು 42 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈವತ್ತಾದ್ರೂ ಯಾವುದಾದ್ರೂ ಸಿನಿಮಾ ಅಪ್ ಡೇಟ್ ಇರಬಹುದಾ ಎಂದರೆ ಅದೂ ಸಿಕ್ಕಿಲ್ಲ.

ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟೊನಿ ಸಿನಿಮಾ ಘೋಷಿಸಿ ಎಷ್ಟೋ ಸಮಯವೇ ಆಗಿದೆ. ಇದರ ಹೊರತಾಗಿ ಅವರು ಕೆಲವು ಸಿನಿಮಾಗಳನ್ನು ನಿರ್ಮಿಸಿದರೇ ಹೊರತು ತಮ್ಮ ಸಿನಿಮಾ ಬಗ್ಗೆ ಯಾವುದೇ ಅಪ್ ಡೇಟ್ ನೀಡಿಲ್ಲ. ಹೀಗಾಗಿಯೇ ಅಭಿಮಾನಿಗಳು ಗುಡ್ ನ್ಯೂಸ್ ಕೊಡಿ ಎಂದು ಕಾಲೆಳೆದಿದ್ದಾರೆ.

ಈವತ್ತಾದರೂ ಯಾವುದಾದರೂ ಸಿನಿಮಾ ಅಪ್ ಡೇಟ್ ಕೊಡಿ ಎಂದು ಕೆಲವರು ಆಗ್ರಹಿಸಿದರೆ, ರಕ್ಷಿತ್ ಅಣ್ಣಂದು ಸುದ್ದಿನೇ ಇಲ್ಲ. ಕರ್ಣ (ಕಿರಿಕ್ ಪಾರ್ಟಿ ಪಾತ್ರದ ಹೆಸರು) ಎಲ್ಲೋ ಹೋಗಿರ್ಬೇಕು ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Kamal Haasan: ಥಗ್ ಲೈಫ್ ಮೂವಿಗೆ ನಿಷೇಧ: ಬೆಂಗಳೂರಿನ ಕಮಲ್ ಹಾಸನ್ ಪ್ರೇಮಿ ಮಾಡಿದ್ದೇನು ಗೊತ್ತಾ