Publish Date: Mon, 02 Feb 2026 (16:15 IST)
Updated Date: Mon, 02 Feb 2026 (16:25 IST)
ಬೆಂಗಳೂರು: ಇದೇ 6ರಂದು ರಾಜ್ ಬಿ ಶೆಟ್ಟಿ ನಟನೆಯ ರಕ್ಕಸಪುರದೊಳ್ ಚಿತ್ರವು ಬಿಡುಗಡೆಯಾಗಲಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
ರಾಜ್ ಬಿ ಶೆಟ್ಟಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿರುವ 'ರಕ್ಕಸಪುರದೊಳ್' ಸಿನಿಮಾ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಗಮನ ಸೆಳೆದಿದ್ದು, ಹೊಸ ಭರವಸೆಯನ್ನು ಮೂಡಿಸಿದೆ.
ಹಾಸ್ಯ ಪಾತ್ರಗಳಲ್ಲಿ ಮಾತ್ರವಲ್ಲ ಖಡಕ್ ಮಾಸ್ ಅವತಾರದಲ್ಲಿ ಕೂಡ ಅಬ್ಬರಿಸಬಲ್ಲೆ ಎಂದು ರಾಜ್ ಪದೇ ಪದೆ ಸಾಬೀತು ಮಾಡುತ್ತಿದ್ದಾರೆ. 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ದುಷ್ಟ ಜಮೀನ್ದಾರನಾ ಪಾತ್ರದಲ್ಲಿ ದರ್ಬಾರ್ ನಡೆಸುತ್ತಿದ್ದಾರೆ. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.
ವಿಚಿತ್ರವಾಗಿ ಆಡುವ ಮೆಂಟಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಈ ಬಾರಿ ಸರ್‌ಪ್ರೈಸ್ ನೀಡಲು ರಾಜ್ ಬಿ ಶೆಟ್ಟಿ ರೆಡಿಯಾಗಿದ್ದಾರೆ.
ಸದಾ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಉಢಾಪೆ ಆಗಿದ್ದರೂ ಬಹಳ ಚಾಲಾಕಿ ಆಸಾಮಿ ಈತ. ಶಾಸಕನ ಮಗಳ ಕೊಲೆ ಪ್ರಕರಣವನ್ನು ಮೆಂಟಲ್ ಪೊಲೀಸ್ ಆಫೀಸರ್ ಹೇಗೆ ಭೇದಿಸುತ್ತಾನೆ ಎನ್ನುವ ಕಥೆ ಚಿತ್ರದಲ್ಲಿ ಇರುವಂತೆ ಕಾಣ್ತಿದೆ. ರವಿ ಸಾರಂಗ ನಿರ್ದೇಶನದ ಚಿತ್ರಕ್ಕೆ ಸ್ಟಂಟ್ ಮಾಸ್ಟರ್ ರವಿವರ್ಮಾ ಬಂಡವಾಳ ಹೂಡಿದ್ದಾರೆ. ಇನ್ನೂ ಈ ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ.