Select Your Language

Notifications

webdunia
webdunia
webdunia
webdunia

ಕೊನೆ ಕ್ಷಣದಲ್ಲಿ ರಾಜು ತಾಳಿಕೋಟೆ ಕೇಳಿಕೊಂಡಿದ್ದು ಇದೇ ಮಾತು: ಕೇಳಿದ್ರೆ ಕಣ್ಣೀರೇ ಬರುತ್ತೆ

Raju Thalikote

Krishnaveni K

ಬೆಂಗಳೂರು , ಮಂಗಳವಾರ, 14 ಅಕ್ಟೋಬರ್ 2025 (14:14 IST)
Photo Credit: Instagram
ಬೆಂಗಳೂರು: ನಿನ್ನೆಯಷ್ಟೇ ನಿಧನರಾದ ನಟ ರಾಜು ತಾಳಿಕೋಟೆಯವರು ಕೊನೆ ಕ್ಷಣದಲ್ಲಿ ಏನು ಹೇಳಿದ್ದರು ಎಂದು ಜೊತೆಗಿದ್ದ ನಟ ಶೈನ್ ಶೆಟ್ಟಿ ಹೇಳಿಕೊಂಡು ಕಣ್ಣೀರು ಮಿಡಿದಿದ್ದಾರೆ.

ಉಡುಪಿಯಲ್ಲಿ ಶೈನ್ ಶೆಟ್ಟಿ ನಾಯಕರಾಗಿರುವ ಸಿನಿಮಾದ ಶೂಟಿಂಗ್ ಗಾಗಿ ರಾಜು ತಾಳಿಕೋಟೆ ಬಂದಿದ್ದರು. ಮೂರು ದಿನಗಳ ಶೂಟಿಂಗ್ ಗಾಗಿ ಉಡುಪಿಗೆ ಬಂದಿದ್ದರು. ಮೊನ್ನೆ ರಾತ್ರಿ ಶೂಟಿಂಗ್ ಮುಗಿಸಿ ಮಲಗಿದ್ದಾಗ ರಾತ್ರಿ ಸುಮಾರು 11.59 ಕ್ಕೆ ರಾಜು ತಾಳಿಕೋಟೆಗೆ ಉಸಿರಾಟದ ಸಮಸ್ಯೆ ಕಂಡುಬಂದಿದೆ.

ತನಗೆ ಹೀಗಾಗುತ್ತಿದೆ ಎಂದು ಸ್ವತಃ ರಾಜು ತಾಳಿಕೋಟೆಯವರೇ ಚಿತ್ರತಂಡದ ಮ್ಯಾನೇಜರ್ ಗೆ ಕರೆ ಮಾಡಿ ಹೇಳಿದ್ದಾರೆ. ಹೀಗಾಗಿ ಪಕ್ಕದ ರೂಂನಲ್ಲಿದ್ದ ಶೈನ್ ಶೆಟ್ಟಿ ಸೇರಿದಂತೆ ಕೆಲವರು ಕಾರ್ ನಲ್ಲಿ ಅವರನ್ನು ಹೆಬ್ರಿಯಲ್ಲಿರುವ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲೂ ಅವರು ಮಾತನಾಡಿದ್ದರು. ಕೊನೆ ಕ್ಷಣಗಳಲ್ಲಿ ಅವರ ಜೊತೆಗಿದ್ದೆ. ಆಸ್ಪತ್ರೆಗೂ ನಾನೇ ಕರೆದುಕೊಂಡು ಹೋಗಿದ್ದು. ಆರು ನಿಮಿಷಗಳ ಕಾಲ ಕಾರಿನಲ್ಲಿ ಮಾತನಾಡುತ್ತಿದ್ದರು. ಬೇಗ ಒಯ್ಯೋ... ಪ್ರಾಣ ಉಳಿಸೋ ಎಂದು ಹೇಳುತ್ತಲೇ ಇದ್ದರು. 9 ನಿಮಿಷದಲ್ಲಿ ಆಸ್ಪತ್ರೆಗೆ ತಲುಪಿದ್ವಿ. ಆದರೆ ಕೊನೆಯ ಮೂರು ನಿಮಿಷ ಅವರು ಮಾತನಾಡಲಿಲ್ಲ. ಆಗಲೇ ಅವರಿಗೆ ಪಲ್ಸ್ ನಿಂತಿತ್ತು. ಅಲ್ಲಿ ಸಿಪಿಆರ್ ಕೊಟ್ಟಾಗ ಪಲ್ಸ್ ವಾಪಸ್ ಬಂತು. ಆದರೆ ಬಿಪಿ ಮೂರು ಮೂರು ಡೋಸ್ ಔಷಧಿ ಕೊಟ್ಟರೂ 60 ರ ಮೇಲೆ ಬರಲಿಲ್ಲ. ಹೀಗಾಗಿ ಅವರಿಗೆ ಡಯಾಲಿಸಿಸ್ ಮಾಡಲು ಆಗಲಿಲ್ಲ. ಅವರ ಕಿಡ್ನಿ ಮತ್ತು ಬ್ರೈನ್ ವರ್ಕ್ ಆಗುತ್ತಿರಲಿಲ್ಲ. ಹೀಗಾಗಿ ಬದುಕಿಸಲಾಗಲಿಲ್ಲ. ಎಷ್ಟು ಅವರನ್ನು ಮೆಷಿನ್ ಸಪೋರ್ಟ್ ಕೊಟ್ಟು ಬದುಕಿಸಲು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದಾರೆ’ ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದ್ದವರು ಯಾರು ಕೇಳಿದ್ರೆ ಶಾಕ್ ಆಗ್ತೀರಿ