Select Your Language

Notifications

webdunia
webdunia
webdunia
webdunia

ರಾಜು ತಾಳಿಕೋಟೆ ಜತೆಗಿನ ಒಡನಾಟ ನೆನೆದು ನಟ ಶೈನ್ ಶೆಟ್ಟಿ ಕಣ್ಣೀರು

Actor Shain Shetty

Sampriya

ಉಡುಪಿ , ಸೋಮವಾರ, 13 ಅಕ್ಟೋಬರ್ 2025 (21:00 IST)
Photo Credit X
ಉಡುಪಿ: ನಿಧನರಾದ ರಾಜು ತಾಳಿಕೋಟೆ ಅವರು ನನ್ನನ್ನು ಮಗನ ಹಾಗೇ ನೋಡಿಕೊಳ್ಳುತ್ತಿದ್ದು. ಸಿನಿಮಾ ಒಪ್ಪಿಕೊಂಡಿದ್ದು ನಿನಗೋಸ್ಕರ ಎಂದು  ಹೇಳುತ್ತಿದ್ದರು ಎಂದು ರಾಜು ತಾಳಿಕೋಟೆಯವರ ನಿಧನಕ್ಕೆ ನಟ ಶೈನ್ ಶೆಟ್ಟಿ  ಕಣ್ಣೀರು ಹಾಕಿದ್ದಾರೆ. 

ಮಣಿಪಾಲ ಆಸ್ಪತ್ರೆ  ಬಳಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಬಿಗ್‌ಬಾಸ್ ಸೀಸನ್ 7ರಲ್ಲಿ ನಾವು ಜತೆಗಿದ್ದೆವು. ಅವರೊಂದಿಗೆ ಉತ್ತಮ ಒಡನಾಟವಿತ್ತು.ಅವರದ್ದು ತುಂಬಾನೇ ತಮಾಷೆಯ ವ್ಯಕ್ತಿತ್ವ.  ಸಿನಿಮಾ ನಿರ್ಮಾಣದ ಕಾಲ ಕೂಡಿ ಬಂದಾಗ ರಾಜು ಅವರನ್ನು ಸಂಪರ್ಕ ಮಾಡಿದ್ದೆ. ನಮ್ಮ ಸಿನಿಮಾಗೆ ಮೊದಲು ಆಯ್ಕೆ ಮಾಡಿದ್ದು ರಾಜು ತಾಳಿಕೋಟೆ ಅವರನ್ನು. ಪಾತ್ರ ಮತ್ತು ಡೈಲಾಗ್ ಅವರಿಗಾಗಿಯೇ ಬರೆದಿದ್ದೇವೆ. 

ಸಿನಿಮಾದ ಶೂಟಿಂಗ್‌ಗಾಗಿ 40 ದಿನದ ಶೆಡ್ಯೂಲ್ ಫಿಕ್ಸ್ ಆಗಿತ್ತು. ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ. ಉಡುಪಿ, ಮಂಗಳೂರು ಸುತ್ತಾಡಲು, ಮೀನು ತಿನ್ನಲು ಒಂದು ದಿನ ಮೊದಲೇ ಬಂದಿದ್ದರು. ಗೆಳೆಯರ ಜೊತೆ ಬೇರೆ ಬೇರೆ ಜಾಗಕ್ಕೆ ಸುತ್ತಾಡಿದ್ದಾರೆ ಎಂದರು.

ಭಾನುವಾರ ರಾತ್ರಿ 11 ಗಂಟೆಗೆ ತಂಡದ ಜೊತೆ ಮಾತನಾಡಿದ್ದಾರೆ. ಬಳಿಕ 11:59ಕ್ಕೆ ಉಸಿರಾಟ ಸಮಸ್ಯೆ ಅಂತ ಫೋನ್ ಮಾಡಿದ್ದಾರೆ. ಕೂಡಲೇ ಹೆಬ್ರಿ ಹೆಲ್ತ್ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಂದ ನೇರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬಂದೆವು. ಕಳೆದ ರಾತ್ರಿಯೇ ಕುಟುಂಬಕ್ಕೆ ಮಾಹಿತಿಯನ್ನು ಕೊಟ್ಟಿದ್ದೇವೆ. ಮಕ್ಕಳು ಕುಟುಂಬಸ್ಥರು ಬಂದಿದ್ದರು. ಬಳಿಕ ಕೊನೆಯುಸಿರೆಳೆದಿದ್ದಾರೆ ಎಂದು ಬೇಸರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಗೆ ಹೃದಯಾಘಾತವಾದಗ ಚಿತ್ರತಂಡ ನಡೆಸಿಕೊಂಡ ರೀತಿ ಬಗ್ಗೆ ಪುತ್ರ ಭರತ್ ತಾಳಿಕೋಟೆ ಏನಂದ್ರು