ಚೆನ್ನೈ: ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಸೋಲಿನ ನಂತರ ನಿರ್ದೇಶಕ ನೆಲ್ಸನ್ ದಿಲೀಪ್ ಜೊತೆ ಸಿನಿಮಾ ಮಾಡುವ ಯೋಜನೆಯನ್ನು ಸೂಪರ್ ಸ್ಟಾರ್ ರಜನೀಕಾಂತ್ ಕೈ ಬಿಡುವ ಚಿಂತನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.
ಬೀಸ್ಟ್ ಬಳಿಕ ನೆಲ್ಸನ್ ದಿಲೀಪ್ ಕುಮಾರ್ ರಜನೀಕಾಂತ್ ಜೊತೆಗೆ ಸಿನಿಮಾ ಮಾಡಬೇಕಾಗಿತ್ತು. ಇನ್ನೂ ಹೆಸರಿಡದ ತಲೈವಾ 169 ಸಿನಿಮಾಗೆ ನಿರ್ದೇಶಕ ನೆಲ್ಸನ್ ಎಂದು ಈಗಾಗಲೇ ಘೋಷಣೆಯಾಗಿದೆ.
ಆದರೆ ಬೀಸ್ಟ್ ಸೋಲಿನ ಬಳಿಕ ನಿರ್ದೇಶಕರನ್ನೇ ಬದಲಾಯಿಸಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಬಂದಿಲ್ಲ.