Publish Date: Tue, 29 Dec 2020 (16:25 IST)
Updated Date: Tue, 29 Dec 2020 (16:27 IST)
ಚೆನ್ನೈ: ಸದ್ಯದಲ್ಲೇ ರಾಜಕೀಯ ಪಕ್ಷ ಘೋಷಣೆ ಮಾಡಲು ಹೊರಟಿದ್ದ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಮೊನ್ನೆಯಷ್ಟೇ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದ ರಜನಿಗೆ ವೈದ್ಯರು ಒಂದು ವಾರ ಕಾಲ ಕಟ್ಟುನಿಟ್ಟಿನ ವಿಶ್ರಾಂತಿ ಸೂಚಿಸಿದ್ದಾರೆ. ಈ ಅನಾರೋಗ್ಯವೇ ರಜನಿಯನ್ನು ತಮ್ಮ ರಾಜಕೀಯ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದೆ ಎನ್ನಲಾಗಿದೆ. ಅನಾರೋಗ್ಯದ ಮೂಲಕ ದೇವರು ರಾಜಕೀಯ ಬೇಡವೆಂದು ಸೂಚನೆ ನೀಡಿದ್ದಾನೆ. ಹೀಗಾಗಿ ರಾಜಕೀಯಕ್ಕೆ ಬರಲ್ಲ ಎಂದು ರಜನಿ ಘೋಷಿಸಿದ್ದಾರೆ.
ಇನ್ನು, ರಜನಿ ಇಂತಹದ್ದೊಂದು ನಿರ್ಧಾರ ಪ್ರಕಟಿಸುತ್ತಿದ್ದಂತೆ ಇತ್ತೀಚೆಗಷ್ಟೇ ರಾಜಕೀಯ ಪಕ್ಷ ಸ್ಥಾಪಿಸಿರುವ ಕಮಲ್ ಹಾಸನ್ ನಿರಾಸೆ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಆರೋಗ್ಯದ ದೃಷ್ಟಿಯಿಂದ ಇಂತಹ ನಿರ್ಧಾರಕ್ಕೆ ಬಂದಿರುವುದರಿಂದ ಅದನ್ನು ಗೌರವಿಸುತ್ತೇನೆ. ಸದ್ಯದಲ್ಲೇ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.