Publish Date: Fri, 30 Oct 2020 (04:11 IST)
Updated Date: Fri, 30 Oct 2020 (04:12 IST)
ಚೆನ್ನೈ : ಸೂಪರ ಸ್ಟಾರ್ ರಜನೀಕಾಂತ್ ಅವರು ಸಿನಿಮಾದ ಜೊತೆಗೆ ರಾಜಕೀಯಕ್ಕೆ ಧುಮುಕಿದ್ದು, ಪಕ್ಷವೊಂದನ್ನು ಕಟ್ಟಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಇದೀಗ ರಜನೀಕಾಂತ್ ಜನರನ್ನು ವಂಚಿಸಿದ್ದಾರೆ ಎನ್ನಲಾಗಿದೆ.
ಹೌದು. ಕಳೆದ ಕೆಲವು ತಿಂಗಳುಗಳ ಹಿಂದೆ ರಜನೀಕಾಂತ್ ಅವರು 234 ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದಕಾರಣ ಅನೇಕ ರಜನೀಕಾಂತ್ ಅಭಿಮಾನಿಗಳು ಪಕ್ಷಕ್ಕೆ ಸೇರಲು ಮತ್ತು ರಾಜಕೀಯದಲ್ಲಿ ಬೆರೆಯಲು ನಿರ್ಧರಿಸಿದ್ದರು.
ಆದರೆ ಇದೀಗ ರಜನೀಕಾಂತ್ ಅಭಿಮಾನಿಗಳನ್ನು ವಂಚಿಸಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಅವರು ರಾಜಕೀಯ ಪ್ರವೇಶಿಸುವುದು ಡೌಟ್ ಎನ್ನಲಾಗಿದೆ. ಹಾಗಾಗಿ 2021ರ ವಿಧಾನ ಸಭಾ ಚುನಾವಣೆಯಲ್ಲಿ ರಜನೀಕಾಂತ್ ಸ್ಪರ್ಧಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.