ಹೈದರಾಬಾದ್ : ರಾಜಮೌಳಿ ನಿರ್ದೆಶನದ ರಾಮ್ ಚರಣ್ ಮತ್ತು ಜೂನಿಯರ್ ಎನ್ ಟಿಆರ್ ಅಭಿನಯದ ಆರ್ ಆರ್ ಆರ್ ಚಿತ್ರ ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರ ಈಗಾಗಲೇ 900ಕೋಟಿ ರೂ ಸಂಗ್ರಹಿಸುವುದರ ಮೂಲಕ ಬಿಡುಗಡೆಗೂ ಮುನ್ನ ದಾಖಲೆಗಳನ್ನು ಮುರಿಯಲು ಪ್ರಾರಂಭಿಸಿದೆ ಎನ್ನಲಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಆರ್ ಆರ್ ಆರ್ ಚಿತ್ರದ ವಿಶ್ವದಾದ್ಯಂತ ಥಿಯೇಟರ್ ಹಕ್ಕುಗಳನ್ನು 570 ಕೋಟಿ ರೂಗೆ ಮಾರಾಠ ಮಾಡಲಾಗಿದೆ. ಡಿಜಿಟಲ್ ಮತ್ತು ಸೆಟಲೈಟ್ ಹಕ್ಕುಗಳನ್ನು 300ಕೋಟಿ ರೂ.ಗೆ ಮತ್ತು ಸಂಗೀತ ಹಕ್ಕುಗಳನ್ನು 20ಕೋಟಿ ರೂ,ಗೆ ಮಾರಾಟ ಮಾಡಲಾಗಿದ್ದರೆ, ಆಂಧ್ರ ಮತ್ತು ನಿಜಾಮ್ ಥಿಯೇಟರ್ ಹಕ್ಕುಗಳು ಒಟ್ಟಾಗಿ 240ಕೋಟಿ ರೂ. ಗಳಾಗಿದೆ.
ಹಾಗೇ ಈ ಚಿತ್ರದ ಹಿಂದಿ ಥಿಯೇಟರ್ ಹಕ್ಕುಗಳನ್ನು 140 ಕೋಟಿ ರೂ,ಗೆ, ತಮಿಳು ನಾಡಿನ ಹಕ್ಕುಗಳನ್ನು 48ಕೋಟಿ ರೂ.ಗೆ, ಕರ್ನಾಟಕದ ಹಕ್ಕುಗಳನ್ನು 45 ಕೋಟಿ ರೂ.ಗೆ, ಕೇರಳದ ಹಕ್ಕುಗಳನ್ನು 15 ಕೋಟಿ ರೂ.ಗೆ ಸೇರಿದಂತೆ ಎಲ್ಕಾ ಭಾಷೆಗಳ ಹಕ್ಕುಗಳನ್ನು 70ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಒಟ್ಟಾರೆ ಚಿತ್ರ 900ಕೋಟಿ ರೂ, ಸಂಗ್ರಹಿಸಿದ್ದು, ಈ ಚಿತ್ರದ ಬಜೆಟ್ 400ಕೋಟಿ ರೂ ಎನ್ನಲಾಗಿದೆ.