Select Your Language

Notifications

webdunia
webdunia
webdunia
Thursday, 13 March 2025
webdunia

ಬಿದ್ದ ಸ್ಮಶಾನದಲ್ಲೇ ಮತ್ತೆ ಚಿತ್ರೀಕರಣಕ್ಕೆ ರೆಡಿಯಾದ ರಾಧಿಕಾ

ಬಿದ್ದ ಸ್ಮಶಾನದಲ್ಲೇ ಮತ್ತೆ ಚಿತ್ರೀಕರಣಕ್ಕೆ ರೆಡಿಯಾದ ರಾಧಿಕಾ
ಬೆಂಗಳೂರು , ಮಂಗಳವಾರ, 12 ಮಾರ್ಚ್ 2019 (09:16 IST)
ಬೆಂಗಳೂರು: ಶೂಟಿಂಗ್ ವೇಳೆ ಬಿದ್ದು ಬೆನ್ನಿಗೆ ಗಾಯಮಾಡಿಕೊಂಡಿದ್ದ ನಟಿ ರಾಧಿಕಾ ಈಗ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಮತ್ತೆ ಶೂಟಿಂಗ್ ಗೆ ತಯಾರಾಗಿದ್ದಾರೆ.


ತಿಂಗಳುಗಳ ಹಿಂದೆ ರಾಧಿಕಾ ಸ್ಮಶಾನವೊಂದರಲ್ಲಿ ಚಿತ್ರೀಕರಣ ಮಾಡುವಾಗ ಬಿದ್ದು ಬೆನ್ನಿಗೆ ಪೆಟ್ಟು ಮಾಡಿಕೊಂಡಿದ್ದರು. ಇದಾದ ಬಳಿಕ ಕೆಲವು ದಿನ ವಿಶ್ರಾಂತಿ ಪಡೆದ ರಾಧಿಕಾ ಮತ್ತೆ ಅದೇ ಸ್ಮಶಾನದ ಜಾಗದಲ್ಲಿ ಚಿತ್ರೀಕರಣಕ್ಕೆ ರೆಡಿಯಾಗಿದ್ದಾರೆ.

‘ಭೈರಾದೇವಿ’ ಎಂಬ ಸಿನಿಮಾವನ್ನು ತಮ್ಮ ಸ್ವಂತ ಬ್ಯಾನರ್ ನಲ್ಲಿ ರಾಧಿಕಾ ನಿರ್ಮಿಸಿ, ನಟಿಸುತ್ತಿದ್ದು, ಈ ಸಿನಿಮಾದ ಅರ್ಧಕ್ಕೆ ನಿಂತ ಚಿತ್ರೀಕರಣ ಇದೀಗ ಮತ್ತೆ ಪ್ರಾರಂಭವಾಗಲಿದೆ. ಈ ಸಿನಿಮಾದಲ್ಲಿ ರಾಧಿಕಾ ಜತೆಗೆ ರಮೇಶ್ ಅರವಿಂದ್, ಸ್ಕಂದ ಮುಂತಾದವರು ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಈ ಬಾಲಿವುಡ್ ನಟನ ಆಗಮನ?!