Select Your Language

Notifications

webdunia
webdunia
webdunia
webdunia

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ತಬ್ಬಿಕೊಂಡ ಫೋಟೋ ಈಗ ವೈರಲ್!

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ತಬ್ಬಿಕೊಂಡ ಫೋಟೋ ಈಗ ವೈರಲ್!
ಬೆಂಗಳೂರು , ಶನಿವಾರ, 9 ಮಾರ್ಚ್ 2019 (09:14 IST)
ಬೆಂಗಳೂರು: ‘ಗೀತಾ ಗೋವಿಂದಂ’ ಸಿನಿಮಾದ ಲಿಪ್ ಲಾಕ್ ದೃಶ್ಯದ ಮೂಲಕ ವೀಕ್ಷಕರ ಪಾಲಿಗೆ ಹಾಟ್ ಜೋಡಿ ಎನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಹೊಸ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


‘ಗೀತಾ ಗೋವಿಂದಂ’ ನಂತರ ಈ ಜೋಡಿ ಮತ್ತೆ ತೆರೆ ಮೇಲೆ ‘ಕಾಮ್ರೇಡ್’ ಸಿನಿಮಾದಲ್ಲಿ ಜತೆಯಾಗಿ ನಟಿಸುತ್ತಿದ್ದು, ಇದು ತೆಲುಗು, ತಮಿಳು ಅಲ್ಲದೆ, ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಮೂಲಕ ಈ ಹ್ಯಾಂಡ್ಸಮ್ ಜೋಡಿ ಕನ್ನಡದಲ್ಲೂ ಮೋಡಿ ಮಾಡಲಿದೆ.

ಆ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದ್ದು, ವಿಜಯ್ ರನ್ನು ತಬ್ಬಿಕೊಂಡ ರಶ್ಮಿಕಾ ಮಂದಣ್ಣ ಫೋಟೋಗೆ ಭಾರೀ ಲೈಕ್ಸ್ ಬಂದಿದೆ. ಈ ಸಿನಿಮಾದದ ಟೀಸರ್ ಮಾರ್ಚ್ 17 ರಂದು ಬಿಡುಗಡೆಯಾಗಲಿದ್ದು, ಮತ್ತಷ್ಟು ರೊಮ್ಯಾಂಟಿಕ್ ದೃಶ್ಯಗಳಿರಬಹುದೇ ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯುವಂತೆ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬದ್ರಿ v/s ಮಧುಮತಿ ಸಿನಿಮಾದಲ್ಲಿ ‘ಮನೆದೇವ್ರು’ ರಘುರಾಮನ ಹೊಸ ಅವತಾರ