Publish Date: Mon, 11 Mar 2019 (09:51 IST)
Updated Date: Mon, 11 Mar 2019 (09:54 IST)
ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್ ಗೆ ದೊಡ್ಮಗ ದರ್ಶನ್ ಸಾಥ್ ಸಿಕ್ಕಿದೆ.
ಭಾನುವಾರ ಸುಮಲತಾ ಮನೆಗೆ ಬಂದ ದರ್ಶನ್ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು, ಚುನಾವಣೆ ಪ್ರಚಾರದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಸುಮಲತಾಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ‍್ಯತೆ ಇಲ್ಲದ ಕಾರಣ ಸ್ವತಂತ್ರವಾಗಿಯಾದರೂ ಸ್ಪರ್ಧೆಗಿಳಿಯಲು ಅವರು ನಿರ್ಧರಿಸಿದ್ದಾರೆ. ಈ ನಡುವೆ ದೋಸ್ತಿ ಪಕ್ಷಗಳ ಒಮ್ಮತ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧೆಗಿಳಿಯುತ್ತಿರುವ ಸುಮಲತಾಗೆ ರಾಜಕೀಯ ವಲಯದಲ್ಲಿ ತೀವ್ರ ಒತ್ತಡವಿದೆ.
ಹೀಗಾಗಿ ಅಂಬರೀಶ್ ರನ್ನು ತಂದೆಯ ಸ್ಥಾನದಲ್ಲಿ ನೋಡುವ ದರ್ಶನ್, ಅಮ್ಮ ಸುಮಲತಾಗೆ ಏನೇ ಸಹಾಯ ಬೇಕಾದರೂ ಮಾಡಲು ಸಿದ್ಧರಾಗಿರುವುದಾಗಿ ಈ ಮೊದಲೇ ಹೇಳಿದ್ದರು. ಅದರಂತೆ ಸುಮಲತಾ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಹೀಗಾಗಿ ಸುಮಲತಾ ಪರ ದರ್ಶನ ಪ್ರಚಾರ ಮಾಡುವುದು ಪಕ್ಕಾ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ