Select Your Language

Notifications

webdunia
webdunia
webdunia
webdunia

ಸೆಲ್ಫೀ ತೆಗೆಯುತ್ತಿದ್ದ ರಾಧಿಕಾಗೆ ಯಶ್ ಹೀಗೆ ಮಾಡೋದಾ?!

ಸೆಲ್ಫೀ ತೆಗೆಯುತ್ತಿದ್ದ ರಾಧಿಕಾಗೆ ಯಶ್ ಹೀಗೆ ಮಾಡೋದಾ?!
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2020 (11:32 IST)
ಬೆಂಗಳೂರು: ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಎಂಥಾ ಮುದ್ದಾದ, ಆದರ್ಶ ಸ್ಯಾಂಡಲ್ ವುಡ್ ರಿಯಲ್ ಜೋಡಿ ಎನ್ನುವುದು ಎಲ್ಲರಿಗೂ ಗೊತ್ತು. ರಾಧಿಕಾ ಈಗ ಯಶ್ ರ  ಕೈಚಳಕವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಪ್ರಕಟಿಸಿದ್ದಾರೆ.


ರಾಧಿಕಾ ತಮ್ಮ ಮೊಬೈಲ್ ನಲ್ಲಿ ಸೆಲ್ಫೀ ತೆಗೆಯಲು ಒದ್ದಾಡುತ್ತಿದ್ದರೆ ಅದನ್ನು ಯಶ್ ಇನ್ನೊಂದು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ರಾಧಿಕಾ ಪೋಸ್ಟ್ ಮಾಡಿದ್ದು, ನಾನು ಸೆಲ್ಫೀಗಾಗಿ ಸರ್ಕಸ್ ಮಾಡುತ್ತಿದ್ದ  ಅಪ್ಪ-ಮಗಳ ಜೋಡಿ (ಯಶ್-ಐರಾ ಯಶ್) ನನ್ನನ್ನು ಈ ರೀತಿ ಸೆರೆ ಹಿಡಿಯುತ್ತಾರೆಂದು ಗೊತ್ತಿರಲಿಲ್ಲ ಎಂದು ರಾಧಿಕಾ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇವರ ಈ ತುಂಟಾಟವನ್ನು ನೆಟ್ಟಿಗರೂ ಮೆಚ್ಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ದಂಧೆ ಪ್ರಕರಣ; ಈ ಕಾರಣಕ್ಕೆ ಟಾಲಿವುಡ್ ನಲ್ಲಿ ಆತಂಕ ಶುರು