Select Your Language

Notifications

webdunia
webdunia
webdunia
webdunia

ಗರಡಿ ಸಿನಿಮಾ ನಾಯಕಿ ಚೇಂಜ್: ರಚಿತಾ ಜಾಗಕ್ಕೆ ಬಂದ್ರು ಸೋನಲ್

ಗರಡಿ ಸಿನಿಮಾ ನಾಯಕಿ ಚೇಂಜ್: ರಚಿತಾ ಜಾಗಕ್ಕೆ ಬಂದ್ರು ಸೋನಲ್
ಬೆಂಗಳೂರು , ಗುರುವಾರ, 10 ಫೆಬ್ರವರಿ 2022 (09:30 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾಗೆ ನಾಯಕಿ ಬದಲಾಗಿದ್ದಾರೆ. ಈ ಮೊದಲು ರಚಿತಾ ರಾಂ ಇದ್ದರು, ಈಗ ಆ ಜಾಗಕ್ಕೆ ಸೋನಲ್ ಮೊಂತೆರೋ ಬಂದಿದ್ದಾರೆ.

ಯಶಸ್ ಸೂರ್ಯ ನಾಯಕರಾಗಿರುವ ಗರಡಿ ಸಿನಿಮಾಗೆ ರಚಿತಾ ರಾಂ ನಾಯಕಿ ಎಂದು ಘೋಷಿಸಲಾಗಿತ್ತು. ಆದರೆ ಈಗ ಶೂಟಿಂಗ್ ಗೆ ರೆಡಿಯಾಗಬೇಕು ಎನ್ನುವಷ್ಟರಲ್ಲಿ ರಚಿತಾ ಜಾಗಕ್ಕೆ ಸೋನಲ್ ಬಂದಿದ್ದಾರೆ.

ರಚಿತಾ ಈಗಾಗಲೇ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಬ್ಯುಸಿಯಾಗಿದ್ದಾರೆ. ಡೇಟ್ಸ್ ಸಮಸ್ಯೆಯಿಂದಾಗಿ ರಚಿತಾಗೆ ಗರಡಿ ಸಿನಿಮಾ ಮಾಡಲಾಗುತ್ತಿಲ್ವಂತೆ. ಹೀಗಾಗಿ ಚಿತ್ರತಂಡ ನಾಯಕಿಯನ್ನು ಬದಲಾಯಿಸಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಕಾರಣ ಕೊಟ್ಟಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್ ಚರಣ್ ಮುಂದಿನ ಸಿನಿಮಾಗೆ ರಶ್ಮಿಕಾ ಹೀರೋಯಿನ್?