ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಇಂದು ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ದಿನವೇ ಮಾಧ್ಯಮಗಳ ಮುಂದೆ ಮದುವೆ ಬಗ್ಗೆ ರಚಿತಾ ಬಿಗ್ ಅಪ್ ಡೇಟ್ ಕೊಟ್ಟಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ರಮ್ಯಾ ಬಳಿಕ ನಿಮ್ಮ ಮದುವೆ ಯಾವಾಗ ಎಂದು ಯಾರಾದರೂ ನಟಿ ಬಳಿ ಮಾಧ್ಯಮಗಳು, ಅಭಿಮಾನಿಗಳು ಸದಾ ಪ್ರಶ್ನೆ ಮಾಡೋದು ಬಹುಶಃ ರಚಿತಾ ಬಳಿಯೇ ಇರಬೇಕು. ಇದುವರೆಗೆ ರಚಿತಾ ಮದುವೆ ಬಗ್ಗೆ ಗುಟ್ಟುಬಿಟ್ಟುಕೊಟ್ಟಿರಲಿಲ್ಲ.
ಇಂದು 33 ನೇ ವರ್ಷಕ್ಕೆ ಕಾಲಿಟ್ಟಿರುವ ಡಿಂಪಲ್ ಕ್ವೀನ್ ಮದುವೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟಿದ್ದಾರೆ. ನಿಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ ಮೇಡಂ ಎಂದು ಇಂದು ಮಾಧ್ಯಮಗಳು ಕೇಳಿದಾಗ ಇದೆಲ್ಲಾ ನಿಮ್ಮದೇ ಪ್ರಶ್ನೆ, ಯಾವ ಅಭಿಮಾನಿಗಳೂ ನನ್ನ ಬಳಿ ಕೇಳಲ್ಲ, ಬೇಕಿದ್ರೆ ಅಭಿಮಾನಿಗಳನ್ನೇ ಕೇಳಿ ಎಂದು ತಮಾಷೆ ಮಾಡಿದರು.
ಬಳಿಕ ಖಂಡಿತಾ ಮದುವೆ ಆಗ್ತೀನಿ. ಮದುವೆ ಆಗಬೇಕು ಎಂಬ ಯೋಚನೆ ಬಂದಿದೆ. ಮನೆಯಲ್ಲೂ ನೋಡ್ತಿದ್ದಾರೆ. ಮನೆಯವರು ಯಾವ ಹುಡುಗನನ್ನು ತೋರಿಸಿ ಮದುವೆ ಆಗು ಅಂತಾರೋ ಅವರನ್ನು ಮದುವೆ ಆಗ್ತೀನಿ, ನಂಗೆ ಇಂಥಾ ಹುಡುಗನೇ ಬೇಕು ಎಂದು ದೇವ್ರಾಣೆಗೂ ಏನೂ ಇಲ್ಲ ಎಂದಿದ್ದಾರೆ.