ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಇದೇ ವರ್ಷ ಮದುವೆಯಾಗಲಿದ್ದಾರಂತೆ. ಹೀಗಂತ ನಟ ರವಿಚಂದ್ರನ್ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಅಪ್ ಡೇಟ್ ಕೊಟ್ಟಿದ್ದಾರೆ.
ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಹೀರೋಯಿನ್ ರಚಿತಾ ರಾಮ್. ಕನ್ನಡ ಚಿತ್ರರಂಗದಲ್ಲಿ ಬಹಳ ದಿನಗಳಿಂದ ಈಗಿನವರೆಗೂ ಬೇಡಿಕೆಯ ನಟಿಯಾಗಿರುವ ರಚಿತಾ ಇದುವರೆಗೆ ತಮ್ಮ ಲವ್ ಲೈಫ್ ಬಗ್ಗೆ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ತಮ್ಮ ಮದುವೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗಲೆಲ್ಲಾ ಹಾರಿಕೆಯ ಉತ್ತರ ನೀಡುತ್ತಲೇ ಇದ್ದರು. ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಚಿತಾ ಮದುವೆ ಸುದ್ದಿ ಬಂದಿದೆ. ನಿರೂಪಕ ನಿರಂಜನ್ ಮತ್ತು ಡಾಲಿ ಧನಂಜಯ್ ಬ್ಯಾಚುಲರ್ ಲೈಫ್ ಬಗ್ಗೆ ಮಾತನಾಡುತ್ತಿದ್ದರು. ಆಗ ಡಾಲಿ ಧನಂಜಯ್ ರಚಿತಾ ಬ್ಯಾಚುಲರ್ ಆಗಿಯೇ ಇರುವುದನ್ನು ನೋಡಿದರೆ ಹೊಟ್ಟೆ ಉರಿಯುತ್ತದೆ ಎಂದಿದ್ದಾರೆ. ಇದಕ್ಕೆ ರವಿಚಂದ್ರನ್ ಈ ವರ್ಷ ರಚಿತಾ ಮದುವೆಯಾಗಲಿದ್ದಾರೆ ಎಂದಿದ್ದಾರೆ. ಅವರ ಈ ಉತ್ತರ ಕೇಳಿ ಫ್ಯಾನ್ಸ್ ಕುತೂಹಲಕ್ಕೊಳಗಾಗಿದ್ದಾರೆ.