ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆ ಮುಂದೆ ಇಂದು ಅಭಿಮಾನಿಗಳ ದಂಡು ಹರಿದುಬರಲಿದೆ. ಇದಕ್ಕೆ ರಚಿತಾ ಬರೆದ ಈ ಒಂದು ಪತ್ರವೇ ಕಾರಣ. ಅಷ್ಟಕ್ಕೂ ರಚಿತಾ ಪತ್ರ ಬರೆಯಲೂ ಕಾರಣವಿದೆ.
ಇಂದು ರಚಿತಾ ರಾಮ್ ಹುಟ್ಟುಹಬ್ಬ. ಈ ಕಾರಣಕ್ಕೆ ಅವರ ರಾಜರಾಜೇಶ್ವರಿ ನಗರದ ಮನೆ ಮುಂದೆ ಅಭಿಮಾನಿಗಳ ದಂಡೇ ಹರಿದುಬರಲಿದೆ. ಮೊನ್ನೆಯೇ ಅಭಿಮಾನಿಗಳಿಗೆ ತಮ್ಮ ಕೈ ಬರಹದಲ್ಲೇ ಪತ್ರ ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ರಚಿತಾ ಮನೆ ಅಕ್ಟೋಬರ್ 2 ರ ರಾತ್ರಿ ಮತ್ತು ಅಕ್ಟೋಬರ್ 3 ರಂದು ಮನೆ ಹತ್ತಿರವೇ ಸಿಗೋಣ ಎಂದಿದ್ದರು.
ಸಾಮಾನ್ಯ ದಿನಗಳಲ್ಲೂ ರಚಿತಾ ಮನೆಯಲ್ಲಿದ್ದರೆ ಅಭಿಮಾನಿಗಳ ಗುಂಪು ಅವರನ್ನು ನೋಡಲು ಮನೆ ಮುಂದೆ ಬರುವುದಿದೆ. ಈಗ ಅವರ ಹುಟ್ಟುಹಬ್ಬ ಬೇರೆ. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಇಂದೂ ಅಭಿಮಾನಿಗಳು ಅವರನ್ನು ಭೇಟಿ ಮಾಡಿ ಶುಭ ಹಾರೈಸಲಿದ್ದಾರೆ.