Select Your Language

Notifications

webdunia
webdunia
webdunia
webdunia

ಬರ್ತ್ ಡೇ ಮಾಡ್ಕೊಳ್ಳಲ್ಲ ಎಂದಿದ್ದ ರಚಿತಾ ರಾಮ್: ಝೈದ್ ಖಾನ್ ಜೊತೆ ಕೇಕ್ ಕಟಿಂಗ್ ಫೋಟೋ ವೈರಲ್

Rachitha Ram birthday

Krishnaveni K

ಬೆಂಗಳೂರು , ಗುರುವಾರ, 3 ಅಕ್ಟೋಬರ್ 2024 (12:10 IST)
ಬೆಂಗಳೂರು: ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ, ಅಭಿಮಾನಿಗಳು ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿದ್ದರು. ಆದರೆ ಇದೀಗ ಕಲ್ಟ್ ಸಿನಿಮಾ ಹೀರೋ ಝೈದ್ ಖಾನ್ ಹಾಗೂ ಇತರರ ಜೊತೆ ಕೇಕ್ ಕಟಿಂಗ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ರಚಿತಾ ಈಗಾಗಲೇ ಶೂಟಿಂಗ್ ನಲ್ಲಿರುವುದರಿಂದ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಆದರೆ ಪ್ರತೀ ವಾರದಂತೆ ಭಾನುವಾರ ಸಿಗುವುದಾಗಿ ಹೇಳಿದ್ದರು. ಇದೀಗ ಅವರು ಕಲ್ಟ್ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಹೀಗಾಗಿ ತಮ್ಮ ಹುಟ್ಟುಹಬ್ಬವನ್ನು ಕಲ್ಟ್ ಸಿನಿಮಾ ತಂಡದೊಂದಿಗೇ ಆಚರಿಸಿಕೊಂಡಿದ್ದಾರೆ. ಚಿತ್ರದ ನಾಯಕ ಝೈದ್ ಖಾನ್ ಸೇರಿದಂತೆ ಚಿತ್ರತಂಡದೊಂದಿಗೆ ಕೇಕ್ ಕಟಿಂಗ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು, ರಚಿತಾ ಹುಟ್ಟುಹಬ್ಬದ ನಿಮಿತ್ತ ಕಲ್ಟ್ ಸಿನಿಮಾ ತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ರಚಿತಾ ಮುಂಬರುವ ಸಿನಿಮಾಗಳ ಕೆಲವು ಸಿನಿಮಾ ತಂಡಗಳೂ ಪೋಸ್ಟರ್ ಮೂಲಕ ಶುಭಾಶಯ ಕೋರಿವೆ. ಇದಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಸಿನಿ ಸ್ನೇಹಿತರು ರಚಿತಾಗೆ ವಿಶ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೈಕೋಪಾತ್ ಆಗಿ ಬದಲಾಗಲಿದ್ದಾರೆ ಸೂಪರ್ ಸ್ಟಾರ್ ಮಮ್ಮುಟ್ಟಿ: ಏನಿದು ಕಹಾನಿ ಇಲ್ಲಿದೆ ಸ್ಟೋರಿ