Select Your Language

Notifications

webdunia
webdunia
webdunia
webdunia

ಡಿಂಪಲ್ ಕ್ವೀನ್ ರಚಿತಾ ರಾಮ್ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳು

Rachitha Ram

Krishnaveni K

ಬೆಂಗಳೂರು , ಗುರುವಾರ, 3 ಅಕ್ಟೋಬರ್ 2024 (09:04 IST)
ಬೆಂಗಳೂರು: ಡಿಂಪಲ್ ಕ್ವೀನ್ ಎಂದೇ ಚಿರಪರಿಚಿತರಾಗಿರುವ ಸ್ಯಾಂಡಲ್ ವುಡ್ ತಾರೆ ರಚಿತಾ ರಾಮ್ ಗೆ ಇಂದು ಜನ್ಮದಿನದ ಸಂಭ್ರಮ. ನಟಿಯ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ರಚಿತಾ ರಾಮ್ ಮತ್ತು ಅವರ ಅಕ್ಕ ನಿತ್ಯಾ ರಾಮ್ ಇಬ್ಬರೂ ಕಿರುತೆರೆ ಮೂಲಕವೇ ಸಿನಿಮಾ ರಂಗ ಪ್ರವೇಶಿಸಿದವರು. ನಿತ್ಯಾ ಕಿರುತೆರೆಯಲ್ಲೇ ನೆಲಯೂರಿದರು. ಆದರೆ ರಚಿತಾ ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದರು. ದರ್ಶನ್ ನಾಯಕರಾಗಿದ್ದ ಬುಲ್ ಬುಲ್ ಸಿನಿಮಾ ಮೂಲಕ ಸಿನಿಮಾಗೆ ಕಾಲಿಟ್ಟ ರಚಿತಾ ಈಗ ತೆಲುಗಿನಲ್ಲೂ ನಟಿಸಿದ್ದಾರೆ. ಮುಂದೆ ತಮಿಳಿನಲ್ಲಿ ರಜನೀಕಾಂತ್ ಜೊತೆ ಕೂಲಿ ಸಿನಿಮಾದಲ್ಲೂ ಪಾತ್ರ ಮಾಡಲಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರಿಗಿರುವಷ್ಟೇ ಕ್ರೇಜ್ ರಚಿತಾ ಮೇಲೂ ಅಭಿಮಾನಿಗಳಿಗಿದೆ. ಸ್ಟಾರ್ ಹೀರೋಗಳಿಗಿರುವಂತೆ ಅವರ ಬಳಿಯೂ ಕೋಟಿ ಬೆಲೆಯ ಕಾರ್ ಗಳಿವೆ. ಇತ್ತೀಚೆಗಷ್ಟೇ ಕೋಟಿ ಸಂಭಾವನೆ ಪಡೆಯುವ ಮೂಲಕ ಗರಿಷ್ಠ ಸಂಭಾವನೆ ಪಡೆದ ಕನ್ನಡದ ನಾಯಕ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ರಚಿತಾ ಮೂಲತಃ ಭರತನಾಟ್ಯ ಕಲಾವಿದೆ. 50 ಕ್ಕೂ ಹೆಚ್ಚು ಸ್ಟೇಜ್ ಶೋಗಳನ್ನು ನೀಡಿದ ಖ್ಯಾತಿ ಅವರದ್ದು. ಇನ್ ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಕನ್ನಡದ ನಟಿ ಅವರು. ರಚಿತಾ ಈಗ 32 ನೆಯ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಅವರ ಕಡೆಯಿಂದ ಇನ್ನೂ ಮದುವೆ ಸುದ್ದಿ ಯಾವಾಗ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BigBoss Season11: ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಲವ್‌ ಸ್ಟೋರಿ