Select Your Language

Notifications

webdunia
webdunia
webdunia
webdunia

ಧ್ರುವ ಸರ್ಜಾ ಒಂದೇ ಫೋನ್ ಕರೆಗೆ ದೊಡ್ಡ ತ್ಯಾಗ ಮಾಡಿದ ಶಿವಣ್ಣ

ShivRajkumar Bairati Ranagal Cinema

Sampriya

ಬೆಂಗಳೂರು , ಬುಧವಾರ, 2 ಅಕ್ಟೋಬರ್ 2024 (17:54 IST)
Photo Courtesy X
ಚಂದನವನದಲ್ಲಿ ಈ ವರ್ಷ ಬಿಡುಗಡೆ ಆಗಬೇಕಿರುವ ಬಹುನಿರೀಕ್ಷಿತ ಸಿನಿಮಾಗಳೆಂದರೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಅವರ ಭೈರತಿ ರಣಗಲ್ ಹಾಗೂ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್.  

ಇದೀಗ ಮಾರ್ಟಿನ್ ಸಿನಿಮಾ ಅಕ್ಟೋಬರ್ 11ಕ್ಕೆ ಥಿಯೇಟರ್‌ಗೆ ಬರಲು ಸಿದ್ಧವಾಗಿದೆ. ಅದರೊಂದಿಗೆ ಭೈರತಿ ರಣಗಲ್ ಸಿನಿಮಾ ಕೂಡಾ ಅಕ್ಟೋಬರ್ 4ಕ್ಕೆ ಬಿಡುಗಡೆ ಮಾಡಲು ಗೀತಾ ಶಿವರಾಜ್‌ಕುಮಾರ್ ನಿರ್ಧರಿಸಿದ್ದರು. ಆದರೆ ಇದೀಗ ದಿಢೀರನೆ ಶಿವಣ್ಣ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

ಅದಕ್ಕೆ ಕಾರಣ ಧ್ರುವ ಸರ್ಜಾ.  ಭೈರತಿ ರಣಗಲ್ ಅಕ್ಟೋಬರ್ ರಿಲೀಸ್ ಆಗಿದ್ದರೆ ಮಾರ್ಟಿನ್‌ಗೆ ತೊಂದರೆ ಆಗುತ್ತಿತ್ತು. ಈ ಸಂಬಂಧ ಶಿವಣ್ಣನಿಗೆ ಧ್ರುವ ಸರ್ಜಾ ಕರೆ ಮಾಡಿ ತಮ್ಮ ಸಿನಿಮಾವನ್ನು ಮುಂದಕ್ಕೆ ಹಾಕುವಂತೆ ಕೇಳಿಕೊಂಡಿದ್ದಾರೆ. ಆ ವೇಳೆ ಇಬ್ಬರ ನಡುವೆ ನಡೆದ ಸಂಭಾಷಣೆಯನ್ನು ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ರಿವೀಲ್ ಮಾಡಿದ್ದಾರೆ. ಅಲ್ಲದೆ ಧ್ರುವ ಸರ್ಜಾ ಕೂಡ ಆ ಘಟನೆಯನ್ನು ವಿವರಿಸಿದ್ದಾರೆ.

ಇತ್ತೀಚೆಗೆ ಪ್ರಥಮ್‌ ಖರೀದಿಸಿದ್ದ ಹೊಸ ಕಾರು ಅನ್ನು ಶಿವಣ್ಣ ಮೊದಲು ಡ್ರೈವ್ ಮಾಡಿದ್ದರು. ಆ ವೇಳೆ ಶಿವಣ್ಣ ಸಹಾಯ ಮನೋಭಾವದ ಬಗ್ಗೆ ಮಾತಾಡುವಾಗ ಪ್ರಥಮ್ 'ಭೈರತಿ ರಣಗಲ್' ಯಾಕೆ ಪೋಸ್ಟ್‌ಪೋನ್ ಆಯ್ತು ಎಂಬುದರ ಬಗ್ಗೆ ಹೇಳಿದ್ದಾರೆ.  ಮಾರ್ಟಿನ್ ಸಿನಿಮಾ ಅಕ್ಟೋಬರ್ 11ಕ್ಕೆ ಬರುತ್ತಿದೆ ಅಂದಿದ್ದಕ್ಕೆ ಇದೀಗ ಭೈರತಿ ರಣಗಲ್ ಸಿನಿಮಾವನ್ನೊ  ಒಂದು ತಿಂಗಳು ಮುಂದಕ್ಕೆ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್‌ನಲ್ಲಿ ಧನರಾಜ್ ಆಚಾರ್ ಕಣ್ಣೀರು, ವೀಕ್‌ ಮೈಂಡ್‌ನವರು ಹೋಗಬಾರದೆಂದ ನೆಟ್ಟಿಗರು