ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿ ಅದ್ಭುತ ರೆಸ್ಪಾನ್ಸ್ ಪಡೆಯುತ್ತಿದೆ. ಈ ನಡುವೆ ಸಿನಿಮಾಗೆ ಈ ಕೆಲವರಿಂದಲೇ ತೊಂದರೆಯಾಗುತ್ತಿದೆ. ಇದರ ಬಗ್ಗೆ ಇಲ್ಲಿದೆ ನೋಡಿ ವಿವರ.
ಕಾಂತಾರ ಚಾಪ್ಟರ್ 1 ಅಧಿಕೃತವಾಗಿ ನಿನ್ನೆ ಬಿಡುಗಡೆಯಾಗಿದ್ದರೂ ಮೊನ್ನೆ ಸಂಜೆಯೇ ಪ್ರೀಮಿಯಮ್ ಶೋ ಹಾಕಲಾಗಿತ್ತು. ಮೊದಲ ದಿನವೇ ಕಾಂತಾರ ನೋಡುವ ಹುಮ್ಮಸ್ಸಿನಲ್ಲಿ ಎಷ್ಟೋ ಜನ ಥಿಯೇಟರ್ ಗೆ ಹೋಗಿ ಬಂದು ಸಿನಿಮಾ ಮಾತ್ರ ಅದ್ಧುತ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ ಹಲವರು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ವಿಮರ್ಶೆ ಬರೆಯುತ್ತಿದ್ದಾರೆ. ಹೀಗೆ ವಿಮರ್ಶೆ ಕೇವಲ ಪದಗಳಲ್ಲಿದ್ದರೆ ಓಕೆ. ಆದರೆ ಕೆಲವರು ಚಿತ್ರಮಂದಿರದಲ್ಲಿ ಕೆಲವೊಂದು ಸನ್ನಿವೇಶದ ವಿಡಿಯೋ ತೆಗೆದು ಹರಿಯಬಿಡುತ್ತಿದ್ದಾರೆ.
ಸಿನಿಮಾ ನೋಡಿದ ಸಂಭ್ರಮದಲ್ಲಿ ವಿಡಿಯೋ ತುಣುಕುಗಳನ್ನು ಹರಿಯಬಿಡುವ ಜನರಿಂದಲೇ ಕಾಂತಾರ ಸಿನಿಮಾಗೆ ತೊಂದರೆಯಾಗುತ್ತಿದೆ. ಇಂತಹ ದೃಶ್ಯಗಳು ಚಿತ್ರದ ಕುತೂಹಲವನ್ನು ಹೊಸಕಿ ಹಾಕುತ್ತವೆ. ಹೀಗಾಗಿ ಅಭಿಮಾನಿಗಳೇ ಈಗ ವಿಡಿಯೋ ಹರಿಯಬಿಡಬೇಡಿ ಎಂದು ಮನವಿ ಮಾಡುವ ಸ್ಥಿತಿಗೆ ಬಂದಿದೆ. ಪೈರಸಿಯಂತೇ ಇಂತಹ ವಿಡಿಯೋ ಕ್ಲಿಪ್ಪಿಂಗ್ ಗಳೂ ಈಗ ಪ್ರಮುಖ ಸಿನಿಮಾಗಳಿಗೆ ತೊಂದರೆ ಕೊಡುತ್ತಿವೆ ಎಂದರೆ ತಪ್ಪಲ್ಲ.