Select Your Language

Notifications

webdunia
webdunia
webdunia
webdunia

ಕಾಂತಾರ ಚಾಪ್ಟರ್ 1 ಬಿಡುಗಡೆ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ರಿಂದ ಬಿಗ್ ಶಾಕ್

Donald Trump

Krishnaveni K

ನ್ಯೂಯಾರ್ಕ್ , ಮಂಗಳವಾರ, 30 ಸೆಪ್ಟಂಬರ್ 2025 (09:32 IST)
ನ್ಯೂಯಾರ್ಕ್: ವಿದೇಶದಲ್ಲೂ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆ ಬೆನ್ನಲ್ಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್ ನೀಡಿದ್ದಾರೆ.

ಅಮೆರಿಕಾದಿಂದ ಹೊರಗಿನ ದೇಶಗಳಲ್ಲಿ ತಯಾರಾಗುವ ಸಿನಿಮಾಗಳು ಅಮೆರಿಕಾದಲ್ಲಿ ಬಿಡುಗಡೆಯಾಗಬೇಕಾದರೆ ಇನ್ನು ಮುಂದೆ ಶೇ.100 ರಷ್ಟು ಸುಂಕ ವಿಧಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದು ಭಾರತೀಯ ಸಿನಿಮಾಗಳಿಗೂ ಅನ್ವಯವಾಗಲಿದೆ.

ಅಕ್ಟೋಬರ್ 2 ರಂದು ಬಿಡುಗಡೆಯಾಗಲಿರುವ ಕಾಂತಾರ ಸಿನಿಮಾ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾಗೂ ಈಗ ಟ್ರಂಪ್ ಸುಂಕದ ಹೊರೆ ಬೀಳಲಿದೆ. ಟ್ರಂಪ್ ನಿರ್ಧಾರದಿಂದ ಭಾರತ ಸೇರಿದಂತೆ ವಿದೇಶೀ ಸಿನಿಮಾಗಳು ಅಮೆರಿಕಾದಲ್ಲಿ ಇನ್ನಷ್ಟು ದುಬಾರಿಯಾಗಲಿದೆ.

ಇತ್ತೀಚೆಗಿನ ದಿನಗಳಲ್ಲಿ ಭಾರತೀಯ ಸಿನಿಮಾಗಳಿಗೆ ಅಮೆರಿಕಾ ದೊಡ್ಡ ಮಾರುಕಟ್ಟೆಯಾಗಿತ್ತು. ಆದರೆ ಈಗ ಟ್ರಂಪ್ ನಿರ್ಧಾರ ಭಾರತೀಯ ಸಿನಿಮಾಗಳ ಮೇಲೂ ಪರಿಣಾಮ ಬೀರಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಯಶವಂತ ಸರದೇಶಪಾಂಡೆ ಇನ್ನಿಲ್ಲ