ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಆದರೆ ಮೊದಲ ನಾಲ್ಕು ದಿನ ಟಿಕೆಟ್ ಸಿಗೋದೇ ಡೌಟು ಎಂಬಂತಾಗಿದೆ ಸ್ಥಿತಿ.
ಕಾಂತಾರ ಚಾಪ್ಟರ್ 1 ಸಿನಿಮಾದ ಟಿಕೆಟ್ ಅಡ್ವಾನ್ಸ್ ಬುಕಿಂಗ್ ನಿನ್ನೆಯಿಂದ ಆರಂಭವಾಗಿದೆ. ಟಿಕೆಟ್ ಮಾರಾಟ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಬಿಸಿ ದೋಸೆಯಂತೆ ಬಿಕರಿಯಾಗಿದೆ. ಬಹುತೇಕ ಚಿತ್ರಮಂದಿರಗಳು ಮೊದಲ 2-3 ದಿನ ಹೆಚ್ಚು ಕಡಿಮೆ ಟಿಕೆಟ್ ಗಳು ಬಹುತೇಕ ಬಿಕರಿಯಾಗಿದೆ. ಮುಂದಿನ ವಾರಂತ್ಯಕ್ಕೆ ದಸರಾ ಹಬ್ಬದ ನಿಮಿತ್ತ ಸಾಲು ಸಾಲು ರಜೆಯಿರುವುದರಿಂದ ಬಹುತೇಕರು ಕುಟುಂಬ ಸಮೇತ ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಾರೆ.
ಕಾಂತಾರ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿರುವುದರಿಂದ ಚಿತ್ರದ ಟಿಕೆಟ್ ಗೆ ಭಾರೀ ಬೇಡಿಕೆ ಬಂದಿದೆ. ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ಈಗಾಗಲೇ ಚಿತ್ರಮಂದಿರಗಳು ಬಹುತೇಕ ಹೌಸ್ ಫುಲ್ ಆಗಿದೆ. ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗಿ ರಾತ್ರಿ 10 ಗಂಟೆಯವರೆಗೂ ಒಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ 18 ರಿಂದ 20 ಶೋಗಳು ಆಯೋಜನೆಯಾಗಿದೆ. ಬೆಳ್ಳಂ ಬೆಳಿಗ್ಗಿನ ಕೆಲವು ಶೋಗಳಲ್ಲಿ ಬಿಟ್ಟರೆ ಉಳಿದೆಲ್ಲಾ ಸಮಯದ ಶೋಗಳು ಬಹುತೇಕ ಫಿಲ್ ಆಗಿದೆ. ಹೀಗಾಗಿ ಕಾಂತಾರ ಚಾಪ್ಟರ್ 1 ಸಿನಿಮಾ ನೋಡಬೇಕೆಂದರೆ ಬಿಡುಗಡೆಯಾದ ಮೊದಲ ಮೂರು-ನಾಲ್ಕು ದಿನವೇ ಟಿಕೆಟ್ ಸಿಗುವುದೇ ಕಷ್ಟವಾಗಲಿದೆ.