ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ನಟಿಸಿದ್ದ ಅಗಲಿದ ಗೆಳೆಯ ರಾಕೇಶ್ ಶೆಟ್ಟಿಯನ್ನು ನೋಡಿ ಅವರ ಗೆಳೆಯರು ಕಣ್ಣೀರು ಹಾಕುತ್ತಿದ್ದಾರೆ. ಕಟೌಟ್ ಮಾಡಿ ನೀನಿರಬೇಕಿತ್ತು ಗೆಳೆಯಾ ಎನ್ನುತ್ತಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಶೆಟ್ಟಿ ಇತ್ತೀಚೆಗೆ ನಮ್ಮನ್ನು ಅಗಲಿದ್ದರು. ಆದರೆ ಅವರು ಸಾವಿಗೆ ಮುನ್ನ ನಟಿಸಿದ್ದ ಕಾಂತಾರ ಚಾಪ್ಟರ್ 1 ಸಿನಿಮಾ ಈಗ ತೆರೆಗೆ ಬಂದಿದೆ. ಕಾಂತಾರ ವಿಶ್ವದಾದ್ಯಂತ ಮಾಡುತ್ತಿರುವ ಹವಾ ಎಲ್ಲರಿಗೂ ಗೊತ್ತಿರುವಂತಹದ್ದೇ.
ಎಲ್ಲರೂ ಈ ಸಿನಿಮಾದ ನಾಯಕ ರಿಷಬ್ ಶೆಟ್ಟಿ ಕಟೌಟ್ ಹಾಕಿ ಸಂಭ್ರಮಿಸುತ್ತಿದ್ದರೆ ಇತ್ತ ರಾಕೇಶ್ ಶೆಟ್ಟಿ ಗೆಳೆಯರು ಮಂಗಳೂರಿನಲ್ಲಿ ಥಿಯೇಟರ್ ಮುಂದೆ ಆತನ ಕಟೌಟ್ ಹಾಕಿ ಹಾಲಿನ ಅಭಿಷೇಕ ಮಾಡಿ ಗೆಳೆಯನನ್ನು ನೆನೆದಿದ್ದಾರೆ.
ಜೊತೆಗೆ ಈ ಯಶಸ್ಸು ನೋಡಲು ನೀನಿರಬೇಕಿತ್ತು ಗೆಳೆಯಾ ಎಂದು ಕಣ್ಣೀರು ಹಾಕಿದ್ದಾರೆ. ರಾಕೇಶ್ ಬದುಕಿದ್ದಾಗಲೇ ಕಾಂತಾರ ಸಿನಿಮಾದ ಪಾತ್ರದ ಬಗ್ಗೆ ತುಂಬಾ ಭರವಸೆಯಿಂದ ಮಾತನಾಡುತ್ತಿದ್ದನಂತೆ. ರಿಷಬ್ ಶೆಟ್ಟಿ ಕೂಡಾ ಆತನ ಬಗ್ಗೆ ಹೊಗಳಿ ಮಾತನಾಡಿದ್ದರು. ಬಹುಶಃ ಆತ ಬದುಕಿದ್ದರೆ ಮುಂದೆ ನನ್ನ ಎಲ್ಲಾ ಸಿನಿಮಾಗಳಲ್ಲಿ ಆತನನ್ನು ಖಾಯಂ ಆಗಿ ಹಾಕಿಕೊಳ್ಳಲು ಪ್ಲ್ಯಾನ್ ಇತ್ತು ಎಂದಿದ್ದರು. ಆದರೆ ಈಗ ಅವನ ಸಕ್ಸಸ್ ನೋಡಲು ಅವನೇ ಇಲ್ಲ ಎಂಬುದು ಗೆಳೆಯರ ಬೇಸರಕ್ಕೆ ಕಾರಣವಾಗಿದೆ.