ಮಿಲನಾ- ಕೃಷ್ಣ ದಂಪತಿಯ ಮನೆಗೆ ಪುಟ್ಟಗೌರಿ ಎಂಟ್ರಿ: ಮುಖ ರಿವಿಲ್‌ ಮಾಡಿದ ತಾರಾ ಜೋಡಿ

Sampriya
ಶುಕ್ರವಾರ, 27 ಸೆಪ್ಟಂಬರ್ 2024 (19:43 IST)
Photo Courtesy X
ಬೆಂಗಳೂರು: ಈಚೆಗೆಷ್ಟೇ ಹೆಣ್ಣು ಮಗುವಿಗೆ ಜನ್ಮನೀಡಿದ ನಟಿ ಮಿಲನಾ ನಾಗರಾಜ್‌ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪುಟ್ಟಗೌರಿಯನ್ನು ಅದ್ದೂರಿಯಾಗಿ ಮನೆಗೆ ಸ್ವಾಗತಿಸುವ ವಿಡಿಯೊವನ್ನು ಇಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.

ಸೆ.5ರಂದು ಮಿಲನಾ ಅವರು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮನೀಡಿದ್ದರು. ಆ ಕಂದಮ್ಮಗೆ ನಟ ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ದಂಪತಿ  ಪರಿ ಎಂದು ನಾಮಕರಣ ಮಾಡಿದ್ದಾರೆ. ಇದೇ ವೇಳೆ ಮಗುವಿನ ಮುಖವನ್ನು ರಿವಿಲ್‌ ಮಾಡಿದ್ದು, ಪುಟ್ಟಗೌರಿಯನ್ನು ನೋಡಿ ಅಭಿಮಾನಿಗಳು ತುಂಬು ಹೃದಯದಿಂದ ಹಾರೈಸಿದ್ದಾರೆ.

ಸೆಲೆಬ್ರೆಟಿಗಳ ಪೈಕಿ ಕೆಲವರಷ್ಟೇ ತಮ್ಮ ಮಗುವಿನ ಮುಖವನ್ನು ರಿವಿಲ್‌ ಮಾಡಿದ್ದಾರೆ. ಅವರಲ್ಲಿ ನೀವು ಒಬ್ಬರು ಎಂದು ಅಭಿಮಾನಿಯೊಬ್ಬರು ಕಮೆಂಟ್‌ ಮಾಡಿದ್ದಾರೆ.

ವಿಡಿಯೊದಲ್ಲಿ ಪರಿ ಜೊತೆ ಮಿಲನಾ ಅವರ ಮುದ್ದು ನಾಯಿಮರಿ ರೊಮಿಯೊ ಸಂಭ್ರಮಿಸುವುದು ಕಾಣಿಸುತ್ತಿದೆ. ಡಾರ್ಲಿಂಗ್‌ ಕೃಷ್ಣ ಕೂಡ ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿರುವುದು ಕಾಣಬಹುದು. ವಿಡಿಯೊ ನೋಡಿದ ನೆಟ್ಟಿಗರು ಮಗಳಿಗೆ ಮೊದಲು ದೃಷ್ಟಿ ತೆಗೆಯುವಂತೆ ಸಲಹೆ ನೀಡಿದ್ದಾರೆ.

ಲವ್‌ಮಾಕ್ಟೆಲ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯವಾಗಿರುವ ಕೃಷ್ಣ ಮತ್ತು ಮಿಲನಾ ಅವರು ಬಳಿಕ ಪ್ರೀತಿಗೆ ಬಿದ್ದಿದ್ದರು. ಈ ತಾರಾ ಜೋಡಿ 2021ರಲ್ಲಿ ಹಸೆಮಣೆಗೆ ಏರಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತಾಳ ಭಾಷೆ ಬಗ್ಗೆ ಮಾತನಾಡುವ ಯಾವ ಹಕ್ಕು ನಿಮಗಿಲ್ಲ

ಧರ್ಮೇಂದ್ರ ಸಾವಿನ ವದಂತಿ ಬೆನ್ನಲ್ಲೇ ಮಗಳಿಂದ ಸ್ಪಷ್ಟನೆ

ಇದೊಂದು ಭಯಾನಕ ಘಟನೆ: ದೆಹಲಿ ಸ್ಫೋಟಕ್ಕೆ ಅಲ್ಲು ಅರ್ಜುನ್ ಸಂತಾಪ

ದರ್ಶನ್ ಜೈಲಿನಲ್ಲಿ, ಬರ್ತಡೇ ದಿನ ವಿಜಯಲಕ್ಷ್ಮಿ ಏನ್‌ ಮಾಡಿದ್ರೂ ಗೊತ್ತಾ

BBK12: ಕಿಚ್ಚ ಸುದೀಪ್ ಬಗ್ಗೆಯೇ ಗಂಭೀರ ಆರೋಪ ಮಾಡಿದ ಧ್ರುವಂತ್

ಮುಂದಿನ ಸುದ್ದಿ
Show comments