Select Your Language

Notifications

webdunia
webdunia
webdunia
webdunia

ಟೀಕೆಯ ಬೆನ್ನಲ್ಲೆ ಅಲ್ಲು ಅರ್ಜುನ್‌ ಹಾಡಿರುವ ಪುಷ್ಪ 2 ಸಿನಿಮಾದ ದಮ್ಮುಂಟೆ ಪಟ್ಟುಕೊರಾ ಹಾಡಿಗೆ ಕತ್ತರಿ

Actor Allu Arjun

Sampriya

ಹೈದರಾಬಾದ್‌ , ಶುಕ್ರವಾರ, 27 ಡಿಸೆಂಬರ್ 2024 (10:52 IST)
Photo Courtesy X
ಹೈದರಾಬಾದ್‌: ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಸಿನಿಮಾದ ದಮ್ಮಿದ್ರೆ ನನ್ನನ್ನು ಹಿಡಿಯಿರಿ ಹಾಡು ಟೀಕೆಗೆ ಗುರಿಯಾದ ಬೆನ್ನಲ್ಲೇ  ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಯೂಟ್ಯೂಬ್‌ನಿಂದ ಆ ಹಾಡನ್ನು ತೆಗೆದುಹಾಕಿದೆ.

ಅಲ್ಲು ಅರ್ಜುನ್‌ ಹಾಡಿರುವ ದಮ್ಮುಂಟೆ ಪಟ್ಟುಕೊರಾ ಹಾಡು ಡಿಸೆಂಬರ್ 24 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣೆದಾರರ ಸಿಂಡಿಕೇಟ್​ನ ಮುಖಂಡ. ಚಿತ್ರದಲ್ಲಿ ಅಲ್ಲು ಅರ್ಜುನ್ ಅನ್ನು ಹಿಡಿಯಲು ಪೊಲೀಸ್ (ಶೇಖಾವತ್) ಒಬ್ಬ ಬಹಳ ಪ್ರಯತ್ನ ಪಡುತ್ತಿರುತ್ತಾನೆ.  

ದೃಶ್ಯವೊಂದರಲ್ಲಿ ಶೆಖಾವತ್​ಗೆ ಸವಾಲು ಹಾಕುವ ಪುಷ್ಪ  ದಮ್ಮಿದ್ರೆ ನನ್ನನ್ನು ಹಿಡಿಯಿರಿ ಎಂದು ಪೊಲೀಸ್‌ ಅಧಿಕಾರಿ ಶೇಖಾವತ್‌ಗೆ ಎಂದು ಹಾಡು ಹೇಳುತ್ತಾ ಸವಾಲು ಹಾಕುತ್ತಾನೆ. ಈ ಸಾಲು ಟೀಕೆಗೆ ಗುರಿಯಾಗಿತ್ತು. ಪೊಲೀಸರನ್ನು ಗೇಲಿ ಮಾಡಲಾಗಿದೆ ಎಂದೂ ಹೇಳಲಾಗಿತ್ತು.

ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಬಂಧನ ಹಾಗೂ ನಂತರದ ಬೆಳವಣಿಗೆಗಳ ನಡುವೆ ಚಿತ್ರ ತಂಡ ಈ ಹಾಡಿಗೆ ಕತ್ತರಿ ಹಾಕಿದೆ.

ಇನ್ನು ವಿವಾದಗಳ ನಡುವೆಯೇ ಪುಷ್ಪ 2 ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 21 ದಿನಗಳನ್ನು ಪೂರೈಸಿದೆ.  ₹ 1600 ಕೋಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ- ದಚ್ಚು ಅಭಿಮಾನಿಗಳ ಮಧ್ಯೆ ಬಾಸಿಸಮ್ ವಾರ್‌ ಜೋರಾಗುತ್ತಿದ್ದ ಹಾಗೇ ಕ್ಲಾರಿಟಿ ಕೊಟ್ಟ ಸುದೀಪ್ ಫ್ರೆಂಡ್ ಪ್ರದೀಪ್‌