Pushpa 2 collection: ಪುಷ್ಪ 2 ಸಿನಿಮಾ ಕನ್ನಡದಲ್ಲಿ ಗಳಿಕೆ ಮಾಡಿದ್ದೆಷ್ಟು

Krishnaveni K
ಶುಕ್ರವಾರ, 6 ಡಿಸೆಂಬರ್ 2024 (11:43 IST)
ಬೆಂಗಳೂರು: ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ನಿನ್ನೆ ದೇಶದಾದ್ಯಂತ ರಿಲೀಸ್ ಆಗಿತ್ತು. ಈ ಸಿನಿಮಾ ಕರ್ನಾಟಕದಲ್ಲೂ ಬಿಡುಗಡೆಯಾಗಿದ್ದು ಭರ್ಜರಿ ಗಳಿಕೆ ಮಾಡಿದೆ. ಮೊದಲ ದಿನದ ಗಳಿಕೆ ವಿವರ ಇಲ್ಲಿದೆ.

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪುಷ್ಪ 2 ಸಿನಿಮಾ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ಮೂಲಗಳ ಪ್ರಕಾರ ಡಿಸೆಂಬರ್ 4 ರಂದು ಪ್ರೀಮಿಯರ್ ಶೋಗಳಿಂದಲೇ ಚಿತ್ರ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ.

ಇನ್ನು ಎಲ್ಲಾ ಭಾಷೆಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದು ಕರ್ನಾಟಕದಲ್ಲಿ ಮೊದಲ ದಿನ 1 ಕೋಟಿ ರೂ., ತೆಲುಗನಲ್ಲಿ 175 ಕೋಟಿ ರೂ., ಹಿಂದಿಯಿಂದ 67 ಕೋಟಿ ರೂ., ತಮಿಳಿನಿಂದ 7 ಕೋಟಿ ರೂ., ಮಲಯಾಳಂನಿಂದ 5 ಕೋಟಿ ರೂ., ಕಲೆಕ್ಷನ್ ಆಗಿದೆ.

ಕರ್ನಾಟಕದಲ್ಲಿ ಸುಮಾರು 1072 ಶೋಗಳು ದೊರೆತಿತ್ತು. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಮತ್ತು ತಮಿಳಿನಲ್ಲಿ ಅಷ್ಟೊಂದು ಕಲೆಕ್ಷನ್ ಮಾಡಿಲ್ಲ. ಮೂಲ ತೆಲುಗಿನಲ್ಲಿ ಮತ್ತು ಹಿಂದಿಯಲ್ಲಿ ಉತ್ತಮ ಗಳಿಕೆ ಮಾಡಿದೆ. ಕನ್ನಡದಲ್ಲಿ ಹಲವು ಶೋಗಳು ಸಿಕ್ಕರೂ ಮೊದಲ ದಿನ ಅಷ್ಟರಮಟ್ಟಿಗೆ ಗಳಿಕೆಯಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಆಂಡ್ ಗ್ಯಾಂಗ್ ಇಂದು ನೇರ ಕೋರ್ಟ್ ಗೆ ಹಾಜರು: ಇಂದು ಏನೆಲ್ಲಾ ನಡೆಯುತ್ತೆ ನೋಡಿ

ಬಿಗ್ ಬಾಸ್ 12ನೇ ಆವೃತ್ತಿ ಆರಂಭಕ್ಕೆ ದಿನಗಣನೆ: ಈ ಬಾರಿ ಪ್ರೇಕ್ಷಕರಿಗೂ ಕಾದಿದೆ ಬಂಪರ್‌ ಬಹುಮಾನ

ನಟ ವಿಜಯ್‌ಗೆ ಐಟಿ ಇಲಾಖೆಯಿಂದ 1.5 ಕೋಟಿ ದಂಡ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ದಳಪತಿ

ನಟ ದುಲ್ಕರ್ ಸಲ್ಮಾನ್ ಎರಡು ಕಾರು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು

ಮತ್ತೇ ಅದೇ ನಿರ್ಮಾಪಕನ ಜತೆ ಕಾಣಿಸಿಕೊಂಡ ಸಮಂತಾ ರುತ್ ಪ್ರಭು

ಮುಂದಿನ ಸುದ್ದಿ
Show comments