Publish Date: Tue, 13 Oct 2020 (11:35 IST)
Updated Date: Tue, 13 Oct 2020 (11:36 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಶೂಟಿಂಗ್ ಕೊನೆಗೂ ಮುಕ್ತಾಯಗೊಂಡಿದೆ. ಇದೀಗ ಪವರ್ ಸ್ಟಾರ್ ಅಭಿಮಾನಿಗಳಿಗೆ ಸಿನಿಮಾ ಬಿಡುಗಡೆಯ ಕಾತುರ ಶುರುವಾಗಿದೆ.
ಲಾಕ್ ಡೌನ್ ಗಿಂತ ಮೊದಲು ಕೆಲವು ಹಾಡುಗಳ ಚಿತ್ರೀಕರಣ ಬಾಕಿಯಿತ್ತು. ಅದನ್ನೀಗ ಚಿತ್ರತಂಡ ಪೂರ್ತಿ ಮಾಡಿದ್ದು, ಇನ್ನೇನಿದ್ದರೂ ಬಿಡುಗಡೆಯೊಂದೇ ಬಾಕಿಯಿದೆ. ನಿನ್ನೆಗೆ ಚಿತ್ರೀಕರಣ ಮುಕ್ತಾಯವಾಗಿದ್ದು, ನನಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ವಿಜಯ್ ಸರ್, ವೆಂಕಟ್ ಸರ್, ಶಿವು ಸರ್, ಯಶಸ್ವಿಯಾಗಿ ಸಿನಿಮಾ ಮುಗಿಸಿಕೊಟ್ಟ ಅಪ್ಪು ಸರ್ ಗೆ ಧನ್ಯವಾದಗಳು ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.
ಸಿನಿಮಾ ಚಿತ್ರೀಕರಣ ಮುಗಿದ ಸುದ್ದಿ ತಿಳಿದ ಬೆನ್ನಲ್ಲೇ ಅಭಿಮಾನಿಗಳು ಬಿಡುಗಡೆ ಯಾವಾಗ ಎಂದು ಕೇಳಲಾರಂಭಿಸಿದ್ದು, ಗಡಿಬಿಡಿಯಲ್ಲಿ ರಿಲೀಸ್ ಮಾಡಬೇಡಿ, ಸರಿಯಾಗಿ ಪ್ರಚಾರ ಮಾಡಿ, ಬಿಗ್ ರಿಲೀಸ್ ಮಾಡಿ ಎಂದು ಸಲಹೆ ನೀಡಲಾರಂಭಿಸಿದ್ದಾರೆ.