Publish Date: Mon, 12 Oct 2020 (10:58 IST)
Updated Date: Mon, 12 Oct 2020 (11:00 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ರದ್ದು ಎಂಥಾ ಫೇಮಸ್ ಲವ್ ಸ್ಟೋರಿ ಎಂಬುದು ಎಲ್ಲರಿಗೂ ಗೊತ್ತು. ಸುಪ್ರೀಂಕೋರ್ಟ್ ವರೆಗೆ ಹೋಗಿ ತಾವು ಮೆಚ್ಚಿದ ಪರಿಮಳ ಅವರನ್ನೇ ಮದುವೆಯಾಗಿದ್ದರು ಜಗ್ಗೇಶ್.
ಇಂತಿಪ್ಪ ಜಗ್ಗೇಶ್ ತನ್ನ ಹರೆಯದ ವಯಸ್ಸಿನಲ್ಲಿ ಪರಿಮಳ ಮೇಲೆ ಲವ್ ಆಗಿದ್ದು ಇದೇ ಹಾಡು ಕೇಳಿ ಎಂದು ಗುಟ್ಟೊಂದನ್ನು ಬಯಲು ಮಾಡಿದ್ದಾರೆ. ಇದುವರೆಗೆ ನಾನು ಯಾರಿಗೂ ಹೇಳಿಲ್ಲ. ಆದರೆ ನನ್ನ 20 ರ ಹರೆಯದಲ್ಲಿ ಪರಿಮಳಳ ಮೇಲೆ ನನಗೆ ಲವ್ ಆಗಿದ್ದು ಇದೇ ಹಾಡು ಕೇಳಿ ಎಂದಿದ್ದಾರೆ. ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ? ಆಶಾ ಪರೇಖ್, ಸುನಿಲ್ ದತ್ ಅಭಿನಯಿಸಿದ್ದ ಹಿಂದಿಯ ‘ಇತ್ನಾ ಮುಝ್ ಸೇ ತೂ’ ಎನ್ನುವ ಹಳೆಯ ಹಾಡು. ಇದು ಜಗ್ಗೇಶ್ ರಲ್ಲಿ ಪ್ರೀತಿ ಹುಟ್ಟಲು ಕಾರಣವಾದ ಹಾಡಂತೆ.