ಬೆಂಗಳೂರು: ಪುನೀತ್ ರಾಜಕುಮಾರ್ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ‘ಫ್ಯಾಮಿಲಿ ಪ್ಯಾಕ್’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಸದಾ ಹೊಸಬರ ಚಿತ್ರಗಳಿಗೆ ತಮ್ಮ ಬ್ಯಾನರ್ ಮೂಲಕ ಅವಕಾಶ ನೀಡುವ ಪುನೀತ್ ಫ್ಯಾಮಿಲಿ ಪ್ಯಾಕ್ ನಲ್ಲೂ ಬಹುತೇಕ ಹೊಸ ಕಲಾವಿದರಿಗೆ ಮಣೆ ಹಾಕುತ್ತಿದ್ದಾರೆ. ಇವರ ಜತೆಗೆ ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ.
ಫ್ಯಾಮಿಲಿ ಪ್ಯಾಕ್ ಎನ್ನುವ ಹೆಸರೇ ವಿಶಿಷ್ಟವಾಗಿದೆ. ಈ ಟೈಟಲ್ ಗೆ ತಕ್ಕಂತೆ ಫನ್ನಿಯಾಗಿರುವ ವಿಡಿಯೋ ಪೋಸ್ಟರ್ ಒಂದನ್ನು ಪುನೀತ್ ಬಿಡುಗಡೆ ಮಾಡಿದ್ದಾರೆ. ಇದೂ ಕೂಡಾ ಇತ್ತೀಚೆಗಿನ ದಿನಗಳಲ್ಲಿ ಗಮನಸೆಳೆಯುತ್ತಿರುವ ಹೊಸಬರ ಚಿತ್ರಗಳ ಸಾಲಿಗೆ ಸೇರುವುದರಲ್ಲಿ ಸಂಶಯವಿಲ್ಲ.