Publish Date: Tue, 16 Jun 2020 (10:15 IST)
Updated Date: Tue, 16 Jun 2020 (10:17 IST)
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ ಸ್ಟಾಗ್ರಾಂ ಪೇಜ್ ಮೂಲಕ ಅಭಿಮಾನಿಗಳೊಂದಿಗೆ ಸದಾ ಕನೆಕ್ಟ್ ಆಗಿರುತ್ತಾರೆ. ಇದೀಗ ರಶ್ಮಿಕಾ ಸುದೀರ್ಘ ಪೋಸ್ಟ್ ಒಂದನ್ನು ಮಾಡಿದ್ದು, ತಾನು ಎಲ್ಲಕ್ಕಿಂತ ಹೆಚ್ಚು ಪ್ರೀತಿಸುವ ವ್ಯಕ್ತಿಯ ಬಗ್ಗೆ ಬರೆದುಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಜತೆಗಿನ ಎಂಗೇಜ್ ಮೆಂಟ್ ಮುರಿದುಕೊಂಡ ನಂತರ ರಶ್ಮಿಕಾ ಸಾಕಷ್ಟು ಟ್ರೋಲ್ ಗೊಳಗಾಗಿದ್ದರು. ಆದರೆ ಆಗ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ತಂದೆ-ತಾಯಿ. ಇದೀಗ ತಮ್ಮ ನೆಚ್ಚಿನ ತಂದೆಯೇ ತಾವು ಜಗತ್ತಿನಲ್ಲಿ ಅತೀ ಹೆಚ್ಚು ಪ್ರೀತಿಸುವ ವ್ಯಕ್ತಿ ಎಂದು ರಶ್ಮಿಕಾ ಭಾವುಕರಾಗಿ ಬರೆದುಕೊಂಡಿದ್ದಾರೆ.
ನನಗೆ ಅವರು ಯಾವತ್ತೂ ಆಧಾರ ಸ್ತಂಬವಾಗಿದ್ದರು. ಆದರೆ ಯಾವತ್ತೂ ತಮ್ಮ ಪ್ರೀತಿಯನ್ನು ನಾವಿಬ್ಬರೂ ಹಂಚಿಕೊಂಡಿಲ್ಲ. ಆದರೆ ಅವರು ನನ್ನ ಮೇಲೆ ತೋರುವ ಪ್ರೀತಿಯ ರೀತಿಯೇ ಬೇರೆ. ಬಹುಶಃ ಎಲ್ಲಾ ಅಪ್ಪಂದಿರೂ ಹಾಗೆ. ಚಿಕ್ಕವಳಾಗಿದ್ದಾಗ ಅವರು ಬ್ಯುಸಿನೆಸ್ ನಲ್ಲಿ ಬ್ಯುಸಿಯಾಗಿದ್ದರು. ಈಗ ನಾನೂ ಅವರ ಬ್ಯುಸಿನೆಸ್ ಪಾರ್ಟನರ್. ಅಪ್ಪಂದಿರು ಸ್ಟ್ರಿಕ್ಟ್ ಆಗಿರುತ್ತಾರೆ. ಆದರೆ ಅವರೂ ಅಮ್ಮನಷ್ಟೇ ನಮ್ಮನ್ನು ಪ್ರೀತಿಸುತ್ತಾರೆ. ಹೀಗಾಗಿ ನಾನು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರೀತಿಸುವ ವ್ಯಕ್ತಿ ಯಾರು ಎಂದು ನಿಮಗೆ ಗೊತ್ತಾಗಿರಬೇಕಲ್ವಾ?’ ಎಂದು ರಶ್ಮಿಕಾ ಸುದೀರ್ಘವಾಗಿ ತಂದೆಯ ಬಗ್ಗೆ ಬರೆದುಕೊಂಡಿದ್ದಾರೆ.