Select Your Language

Notifications

webdunia
webdunia
webdunia
webdunia

ಪುನೀತ್ ರಾಜಕುಮಾರ್ ನಿರ್ಮಾಣದಿಂದ ಮತ್ತೊಂದು ಸಿನಿಮಾ

ಪುನೀತ್ ರಾಜಕುಮಾರ್ ನಿರ್ಮಾಣದಿಂದ ಮತ್ತೊಂದು ಸಿನಿಮಾ
ಬೆಂಗಳೂರು , ಶುಕ್ರವಾರ, 10 ಜುಲೈ 2020 (09:24 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಪಿಆರ್ ಕೆ ಪ್ರೊಡಕ್ಷನ್‍ ವತಿಯಿಂದ ಹೊಸಬರ ಸಿನಿಮಾಗಳಿಗೆ ಅವಕಾಶ ನೀಡುತ್ತಲೇ ಇರುತ್ತಾರೆ. ಇದೀಗ ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.


ಪುನೀತ್ ತಮ್ಮ ನಿರ್ಮಾಣ ಸಂಸ್ಥೆಯಿಂದ ‘ಮಾಯಾಬಜಾರ್’ ಎಂಬ ಸಿನಿಮಾ ನಿರ್ಮಿಸಿದ್ದರು. ಆ ಸಿನಿಮಾ ನಿರ್ದೇಶಕ ರಾಧಾಕೃಷ್ಣ ರೆಡ್ಡಿಯವರು ಈಗ ಪಿಆರ್ ಕೆ ಪ್ರೊಡಕ್ಷನ್ ಜತೆ ಕೈ ಜೋಡಿಸುತ್ತಿದ್ದು ‘02’ ಎಂಬ ಮೆಡಿಕಲ್ ಥ್ರಿಲ್ಲರ್ ಸಿನಿಮಾವೊಂದನ್ನು ನಿರ್ಮಿಸಲಿದ್ದಾರೆ.

ಈಗಾಗಲೇ ಸಿನಿಮಾದ ಪಾತ್ರಧಾರಿಗಳಿಗಾಗಿ ಹೊಸಬರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ಅಡಿಷನ್ ಕೂಡಾ ನಡೆದಿದ್ದು ಸದ್ಯದಲ್ಲೇ ತಾರಾಬಳಗ ಘೋಷಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಣಮುಖರಾಗಲೆಂದು ಹೋಮ, ಪೂಜೆ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ಸುಮಲತಾ