ಬೆಂಗಳೂರು: ಪುನೀತ್ ರಾಜ್ ಕುಮಾರ್ ನಾಯಕರಾಗಿ ಕೊನೆಯ ಬಾರಿ ಕಾಣಿಸಿಕೊಂಡ ಜೇಮ್ಸ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.
ಇದೇ ಮೊದಲ ಬಾರಿಗೆ ಜೇಮ್ಸ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದ್ದು, ಡೇಟ್ ಕೂಡಾ ಫಿಕ್ಸ್ ಆಗಿದೆ. ಜೇಮ್ಸ್ ಸಿನಿಮಾವನ್ನು ಸ್ಟಾರ್ ಸುವರ್ಣ ವಾಹಿನಿ ಖರೀದಿ ಮಾಡಿತ್ತು. ಇದೀಗ ಜುಲೈ 17 ರಂದು ಸಂಜೆ 5.30 ಕ್ಕೆ ಸಿನಿಮಾ ಪ್ರಸಾರ ಮಾಡಲು ತೀರ್ಮಾನಿಸಿದೆ.
ಈ ಸಿನಿಮಾ ಥಿಯೇಟರ್ ನಲ್ಲಿ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿ ಕೊನೆಗೆ 100 ಕೋಟಿ ಗಳಿಕೆಯ ಕ್ಲಬ್ ಗೆ ಸೇರ್ಪಡೆಯಾಗಿತ್ತು. ಈಗ ಟಿವಿಯಲ್ಲಿ ಪ್ರಸಾರವಾಗಲಿದ್ದು, ಟಿಆರ್ ಪಿ ಏರಿಕೆಯಾಗುವುದು ಖಚಿತ.