Publish Date: Thu, 07 Jul 2022 (10:00 IST)
Updated Date: Thu, 07 Jul 2022 (10:13 IST)
ಮೈಸೂರು: ಶಿವರಾಜ್ ಕುಮಾರ್ ನಿಜವಾದ ಹೆಸರೇನು? ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಶಿವಣ್ಣ ಎಂದು ಕರೆಯುತ್ತಾರೆ. ಆದರೆ ಅವರ ನಿಜವಾದ ಹೆಸರು ಶಿವರಾಜ್ ಕುಮಾರ್ ಅಲ್ಲ! ಹಾಗಂತ ಅವರೇ ಬಹಿರಂಗಪಡಿಸಿದ್ದಾರೆ.
ಮೈಸೂರಿನ ಆಂದೋಲನ ಪತ್ರಿಕೆಯ 50 ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ತಮ್ಮ ನಿಜನಾಮಧೇಯ ಏನು ಎಂದು ಬಹಿರಂಗಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಮುಂತಾದ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ ನನ್ನ ನಿಜವಾದ ಹೆಸರು ನಾಗರಾಜ ಶಿವಪುಟ್ಟ ಸ್ವಾಮಿ. ನನ್ನ ಪಾಸ್ ಪೋರ್ಟ್ ಮತ್ತಿತರ ದಾಖಲೆಗಳಲ್ಲಿ ನನ್ನ ಹೆಸರು ಇದೇ ಇದೆ. ಸಿನಿಮಾಗೆ ಎಂಟ್ರಿ ಆಗಬೇಕಾದರೆ ನೀವು ರಾಜ್ ಕುಮಾರ್ ಫ್ಯಾಮಿಲಿಯವರು ಹೀಗಾಗಿ ಶಿವರಾಜ್ ಕುಮಾರ್ ಎಂದು ಇಟ್ಟುಕೊಳ್ಳಿ ಎಂದು ಅಪ್ಪಾಜಿ ಅವರ ಫ್ರೆಂಡ್ ರಾಮಸ್ವಾಮಿ ಹೇಳಿದ್ರು. ಹೀಗಾಗಿ ನಾನು ಶಿವರಾಜ್ ಕುಮಾರ್ ಆದೆ ಎಂದು ತಮ್ಮ ಹೆಸರಿನ ಹಿಂದಿನ ಅಚ್ಚರಿಯ ವಿಚಾರವನ್ನು ಶಿವಣ್ಣ ಹೊರಹಾಕಿದ್ದಾರೆ.