Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನ ಮನೆ ಹತ್ರ ಬರ್ಬೇಡಿ ಎಂದ ಪುನೀತ್ ರಾಜ್ ಕುಮಾರ್! ಅಭಿಮಾನಿಗಳಿಗೆ ಶಾಕ್!

ಬರ್ತ್ ಡೇ ದಿನ ಮನೆ ಹತ್ರ ಬರ್ಬೇಡಿ ಎಂದ ಪುನೀತ್ ರಾಜ್ ಕುಮಾರ್! ಅಭಿಮಾನಿಗಳಿಗೆ ಶಾಕ್!
ಬೆಂಗಳೂರು , ಶನಿವಾರ, 16 ಮಾರ್ಚ್ 2019 (09:11 IST)
ಬೆಂಗಳೂರು: ಸ್ಟಾರ್ ನಟರ ಬರ್ತ್ ಡೇ ಎಂದರೆ ಅಭಿಮಾನಿಗಳು ತಮ್ಮದೇ ಮನೆ ಮಗನ ಹುಟ್ಟುಹಬ್ಬವೆನ್ನುವಂತೆ ಮನೆ ಮುಂದೆ ಜಮಾಯಿಸುತ್ತಾರೆ. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾರ್ಚ್ 17 ರಂದು ತಮ್ಮ ಬರ್ತ್ ಡೇಗೂ ಮೊದಲು ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.


ಈ ಬಾರಿ ತಮ್ಮ ಹುಟ್ಟುಹಬ್ಬದ ದಿನ ಮಧ್ಯರಾತ್ರಿಯೇ ಮನೆ ಮುಂದೆ ಯಾರೂ ಬರಬೇಡಿ ಎಂದು ಪುನೀತ್ ರಾಜ್ ಕುಮಾರ್ ಮನವಿ ಮಾಡಿದ್ದಾರೆ. ಯಾಕೆಂದರೆ ಮಾರ್ಚ್ 16 ರಂದು ರಾತ್ರಿ ನಾನು ಮನೆಯಲ್ಲಿ ಇರಲ್ಲ. ಹೀಗಾಗಿ ಮನೆಗೆ ಬಂದು ನಿರಾಶೆ ಅನುಭವಿಸುವುದು ಬೇಡ ಎಂದು ಪುನೀತ್ ಮೊದಲೇ ಮನವಿ ಮಾಡಿದ್ದಾರೆ.

ಆದರೆ ಮಾರ್ಚ್ 17 ರಂದು ಬೆಳಿಗ್ಗೆ ನಾನು ಮನೆಯಲ್ಲಿರುತ್ತೇನೆ. ಒಂದು ವೇಳೆ ಯಾರೇ ಮನೆಗೆ ಬಂದು ನನಗೆ ವಿಶ್ ಮಾಡಬೇಕು ಎಂದಿದ್ದರೂ ಹಾರ, ತುರಾಯಿ, ಕೇಕ್ ಎಲ್ಲಾ ತರಬೇಡಿ. ನಿಮ್ಮ ಆಗಮನವೇ ನನಗೆ ದೊಡ್ಡ ಉಡುಗೊರೆ. ಹಾರ, ಕೇಕ್ ಕೆಲವೊಮ್ಮೆ ನನಗೆ ಸರಿಯಾಗಿ ಕಟ್ ಮಾಡಕ್ಕಾಗಲ್ಲ, ಅದರಿಂದ ನಿಮಗೆ ಬೇಸರವಾಗುತ್ತದೆ.

ಅಲ್ಲದೆ, ಕೇಕ್, ಹಾರಕ್ಕೆ ನೀವು ನಿಮ್ಮ ಹಣ ಖರ್ಚು ಮಾಡುತ್ತೀರಿ. ಅದರ ಬದಲು ಆ ಹಣವನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಬಳಸಿ. ನಮ್ಮ ಕುಟುಂಬದ ಮೇಲೆ, ಚಿತ್ರರಂಗದ ಮೇಲೆ ನಿಮ್ಮ ಆಶೀರ್ವಾದ ಸದಾ ಹೀಗೇ ಇರಲಿ ಎಂದು ಪುನೀತ್ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನ್ ಹೋಗಿರುವ ಸಿದ್ದಾರ್ಥ್ ಬರುವವರೆಗೆ ‘ಅಗ್ನಿಸಾಕ್ಷಿ’ಯಲ್ಲಿ ಚಂದ್ರಿಕಾ ಸಿಗಲ್ಲ!