Publish Date: Fri, 15 Mar 2019 (09:20 IST)
Updated Date: Fri, 15 Mar 2019 (09:21 IST)
ಬೆಂಗಳೂರು: ಸ್ಟಾರ್ ಗಳ ಬರ್ತ್ ಡೇಯನ್ನು ಅಭಿಮಾನಿಗಳು ಅದ್ಧೂರಿಯಾಗಿಯೇ ಮಾಡುತ್ತಾರೆ. ಇದೀಗ ತನ್ನ ಮೆಚ್ಚಿನ ಅಭಿಮಾನಿಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಹುಟ್ಟುಹಬ್ಬ ದಿನ ಉಡುಗೊರೆ ನೀಡಲಿದ್ದಾರೆ.
ಮಾರ್ಚ್ 17 ರಂದು ತಮ್ಮ ಹುಟ್ಟುಹಬ್ಬಕ್ಕೆ ಪುನೀತ್ ಅಭಿಮಾನಿಗಳಿಗೆ ‘ಯುವರತ್ನ’ ಸಿನಿಮಾದಲ್ಲಿ ತಮ್ಮ ಲುಕ್ ಹೇಗಿರಲಿದೆ ಎಂದು ಬಹಿರಂಗಪಡಿಸಲಿದ್ದಾರೆ. ಅಂದರೆ ಆ ದಿನ ಯುವರತ್ನ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಸ್ವತಃ ಪುನೀತ್ ಬಹಿರಂಗಪಡಿಸಿದ್ದಾರೆ.
ಇನ್ನು, ಪುನೀತ್ ಅಭಿಮಾನಿಗಳ ಬಳಗ ಆ ದಿನ ರಕ್ತದಾನ ಶಿಬಿರ ಆಯೋಜಿಸಿದ್ದು, ಈ ರೀತಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದಂದು ಸಮಾಜಕ್ಕೆ ಒಳ್ಳೆಯದಾಗುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ನಟ ಸಾರ್ವಭೌಮ ಚಿತ್ರತಂಡ ಪುನೀತ್ ಗಾಗಿಯೇ ಹಾಡೊಂದನ್ನು ರೆಡಿ ಮಾಡಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.