Publish Date: Tue, 28 Jul 2020 (12:44 IST)
Updated Date: Tue, 28 Jul 2020 (12:45 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ತಮ್ಮ ಬ್ಯಾನರ್ ನ ಎರಡು ಸಿನಿಮಾಗಳನ್ನು ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇದಕ್ಕೆ ಕೊಟ್ಟ ಸಮರ್ಥನೆಯೇನು ಗೊತ್ತಾ?
ಆಂಕರ್ ಅನುಶ್ರೀ ಜತೆಗಿನ ಸಂದರ್ಶನದಲ್ಲಿ ಪುನೀತ್ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಆಪ್ ಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿರುವ ಬಗ್ಗೆ ಚಿತ್ರಮಂದಿರಗಳ ಮಾಲಿಕರ ಅಸಮಾಧಾನ ಹೊಂದಿರುವ ಬೆನ್ನಲ್ಲೇ ಪುನೀತ್ ಈ ಹೇಳಿಕೆ ಮಹತ್ವ ಪಡೆದಿದೆ.
‘ಚಿತ್ರಮಂದಿರ ಎಂದರೆ ಮನೆ ಊಟ ಇದ್ದಂತೆ. ಕೆಲವೊಮ್ಮೆ ಬೋರ್ ಆದಾಗ ಹೋಟೆಲ್ ಗೆ ಹೋಗಿ ಎಷ್ಟೇ ತಿಂದರೂ ಮನೆ ಊಟ ಮನೆ ಊಟಾನೇ. ಅದೇ ರೀತಿ ಚಿತ್ರಮಂದಿರಕ್ಕೂ ಓಪನ್ ಆದ ಮೇಲೆ ಜನ ಬಂದೇ ಬರ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಒಟಿಟಿ ಫಾರ್ಮ್ಯಾಟ್ ಅನಿವಾರ್ಯ’ ಎಂದು ಪುನೀತ್ ಹೇಳಿಕೊಂಡಿದ್ದಾರೆ.