Publish Date: Mon, 27 Jul 2020 (10:44 IST)
Updated Date: Mon, 27 Jul 2020 (10:45 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಡುವೆ ಈಗ ಟ್ವಿಟರ್ ಟ್ರೆಂಡ್ ವಾರ್ ಶುರುವಾಗಿದೆ.
ಇಂದು ನಿರ್ಮಾಪಕ ಉಮಾಪತಿ ಗೌಡ ಬರ್ತ್ ಡೇ ಅಂಗವಾಗಿ ಡಿ ಬಾಸ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಹೀಗಾಗಿ ದರ್ಶನ್ ಹೊಸ ಲುಕ್ ನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಟ್ರೆಂಡ್ ಮಾಡಿದ್ದಾರೆ.
ಅದರ ನಡುವೆಯೇ ರಾಕಿ ಬಾಯ್ ಯಶ್ ಅಭಿಮಾನಿಗಳಿಗೆ ಕೆಜಿಎಫ್ 2 ಚಿತ್ರತಂಡ ಖುಷಿಯ ಸುದ್ದಿ ನೀಡಿದೆ. ಜುಲೈ 29 ರಂದು ಸಂಜಯ್ ದತ್ ಬರ್ತ್ ಡೇ ಇದ್ದು, ಆ ದಿನ ಕೆಜಿಎಫ್ 2 ಸಿನಿಮಾದಲ್ಲಿನ ಸಂಜಯ್ ಪಾತ್ರ ‘ಅಧೀರ’ನ ಹೊಸ ಲುಕ್ ಬಿಡುಗಡೆ ಮಾಡುವುದಾಗಿ ಕೆಜಿಎಫ್ ಚಿತ್ರತಂಡ ಘೋಷಿಸಿದೆ. ಹೀಗಾಗಿ ಯಶ್ ಅಭಿಮಾನಿಗಳೂ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳ ಮೂಲಕ ತಮ್ಮ ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರ ಬಿಡುಗಡೆ ಯಾವಾಗ ಎಂದು ಗೊತ್ತಿಲ್ಲದೇ ಇದ್ದರೂ ಈ ಎರಡೂ ಸಿನಿಮಾಗಳೂ ಎಬ್ಬಿಸುತ್ತಿರುವ ಹವಾ ಮಾತ್ರ ಯಾವುದಕ್ಕೂ ಕಮ್ಮಿಯಿಲ್ಲ. ಜತೆಗೆ ಈ ಇಬ್ಬರೂ ಸ್ಟಾರ್ ನಟರ ಹೆಸರಿನಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಟ್ರೆಂಡ್ ಕಾರುಬಾರು ಜೋರಾಗಿಯೇ ನಡೆಯುತ್ತಿದೆ.
Krishnaveni K
Publish Date: Mon, 27 Jul 2020 (10:44 IST)
Updated Date: Mon, 27 Jul 2020 (10:45 IST)